Advertisement

Thirthahalli : ಯು ಆರ್ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!?

02:07 PM Sep 07, 2023 | Team Udayavani |

ತೀರ್ಥಹಳ್ಳಿ : ಮಕ್ಕಳ ಪಾಲಿಗೆ ಬೆಳಕಾಗಬೇಕಾದ ಅಧ್ಯಾಪಕರೇ ಮಕ್ಕಳ ಭವಿಷ್ಯಕ್ಕೆ ಕುತ್ತು ತರುತ್ತಿದ್ದಾರಾ ಎಂಬ ದೊಡ್ಡ ಪ್ರೆಶ್ನೆ ಉದ್ಭವಾಗಿದೆ. ಅದರಲ್ಲೂ ಎಷ್ಟೋ ಮಕ್ಕಳ ಭವಿಷ್ಯ ರೂಪಿಸಿದ್ದ ಯು ಆರ್ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಈಗ ಬ್ರಹ್ಮಾಂಡ ಭ್ರಷ್ಟಾಚಾರ ನೆಡೆಯುತ್ತಿರುವ ಬಗ್ಗೆ ಸಾಕ್ಷಿ ಸಮೇತ ವರದಿಯಾಗುತ್ತಿದೆ.

Advertisement

15 ದಿನಗಳ ಹಿಂದೆ ಶಾಲೆಯ ಉಪಪ್ರಾಂಶುಪಾಲರು ವಿದ್ಯಾರ್ಥಿಯೊಬ್ಬನ ಬಳಿ ಲಂಚ ಕೇಳಿದ್ದ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಕ್ಷೇತ್ರದ ಶಿಕ್ಷಣಾಧಿಕಾರಿಗಳು ತನಿಖೆ ನೆಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ನಂತರ ಉಪಪ್ರಾಂಶುಪಾಲರ ಬಗ್ಗೆ ಈಗಾಗಲೇ ಹಲವು ದೂರುಗಳು ಇದೆ. ಶಾಲೆಯಲ್ಲಿದ್ದ ಪಿಟೋಪಕರಣವನ್ನು ಸಾಗಿಸಿದ್ದಾರ? ಆ ಪಿಟೋಪಕರಣ ಹೋಗಿದ್ದು ಎಲ್ಲಿಗೆ? ಎಂಬ ಪ್ರೆಶ್ನೆ ಇದ್ದರೆ ಪಿಟೋಪಕರಣದ ಆರೋಪದ ಹೇಳಿಕೆಯನ್ನು ಎಂದು ಸ್ವತಃ ಬಿಈಓ ಅವರೇ ಹೇಳಿದ್ದರು.

ಈಗ ಶಾಲೆಯ ಮಕ್ಕಳಿಗೆ ಬರುವ ಪುಸ್ತಕಗಳನ್ನು ಚೀಲಗಳಲ್ಲಿ ತುಂಬಿಸಿ ಬೇರೆ ಕಡೆ ಯಾರಿಗೂ ತಿಳಿಯದ ಹಾಗೆ ಸಾಗಿಸಿದ್ದಾರೆ ಎಂಬ ಆರೋಪದ ಜೊತೆಗೆ ಫೋಟೋ ಸಮೇತ ಸಾರ್ವಜನಿಕರೊಬ್ಬರು ಕಳುಹಿಸಿದ್ದಾರೆ. ಈ ಬಗ್ಗೆ ಬಿಈಓ ಅವರನ್ನು ಕೇಳಿದಾಗ ಈಗಾಗಲೇ ಎಸ್ಡಿಎಂಸಿ ಅವರಿಗೆ ನೋಟಿಸ್ ನೀಡಿದ್ದೇವೆ. ಇಂದು ಮದ್ಯಾನ್ಹ ಇಬ್ಬರ ಬಳಿ ಮಾತನಾಡುತ್ತೇವೆ ಎಂಬುದಾಗಿ ಏನು ಗೊತ್ತಿಲ್ಲದ ರೀತಿ ಮಾತನಾಡುತ್ತಿದ್ದಾರೆ.

ಯು ಆರ್ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ದೊಡ್ಡ ಮಟ್ಟಿನ ಹಗರಣಗಳು ನೆಡೆಯುತ್ತಿದ್ದರು ಬಿಈಓ ಹಾಗೂ ಡಿಡಿಪಿಐ ಗೆ ತಿಳಿಯದೆ ಇರುವುದು ಕುತೂಹಲ ಮೂಡಿಸಿದೆ. ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದರು ಡಿಡಿಪಿಐ ಮೌನ ಯಾಕೆ? ಎಂಬುದು ಸಾರ್ವಜನಿಕರ ಪ್ರೆಶ್ನೆಯಾಗಿದೆ.

Advertisement

ಇನ್ನಾದರೂ ಎಚ್ಚೆತ್ತು ಅಧಿಕಾರಿಗಳು ತಮ್ಮ ನಿಷ್ಠೆಯ ಕೆಲಸ ಮಾಡಿ ಮಕ್ಕಳ ಭವಿಷ್ಯಕ್ಕೆ ಕೊರತೆ ಬಾರದ ರೀತಿ ಕೆಲಸ ಮಾಡುತ್ತಾರ ಕಾದು ನೋಡಬೇಕಿದೆ.

ಇದನ್ನೂ ಓದಿ: Shimoga: ಚುನಾವಣೆಗೋಸ್ಕರ ರಾಮ ಮಂದಿರ ಕಟ್ಟುತ್ತಿಲ್ಲ….: ಸಂಸದ ರಾಘವೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next