Advertisement

‘ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ’ಪರೀಕ್ಷೆ ; ನಾಳೆ ಅಧಿಸೂಚನೆ

04:21 PM Aug 17, 2020 | Karthik A |

ಮಣಿಪಾಲ: ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಹಾಯಕ ಕಮಾಂಡೆಂಟ್‌) ಪರೀಕ್ಷೆ 2020ರ ಅಧಿಸೂಚನೆಯನ್ನು ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಾಳೆ ಬಿಡುಗಡೆ ಮಾಡಲಿದೆ.

Advertisement

ಸಿಎಪಿಎಫ್ 2020 ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್‌  upsc.gov.in. ನಲ್ಲಿ ಆಯೋಗವು ಪ್ರಕಟಿಸಲಿದೆ.

ಸಿಎಪಿಎಫ್ 2020ರ ಅರ್ಜಿ ಸಲ್ಲಿಕೆ ಕಾರ್ಯಗಳೂ ನಾಳೆಯಿಂದ ಪ್ರಾರಂಭವಾಗಲಿವೆ.

ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್‌ 7 ಕೊನೆಯ ದಿನವಾಗಿದೆ.

ಡಿಸೆಂಬರ್‌ 20ರಂದು ಪರೀಕ್ಷೆ
ಯುಪಿಎಸ್‌ಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್‌ 2020ರ ಪ್ರಕಾರ ಯುಪಿಎಸ್‌ಸಿ ಸಿಎಪಿಎಫ್ 2020 (ಸಹಾಯಕ ಕಮಾಂಡೆಂಟ್‌) ಪರೀಕ್ಷೆ ಡಿಸೆಂಬರ್‌ 20ರಂದು ನಡೆಯಲಿದೆ.

Advertisement

ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಹಾಯಕ ಕಮಾಂಡೆಂಟ್‌) ಪರೀಕ್ಷೆಯನ್ನು ಯುಪಿಎಸ್‌ಸಿ ಪ್ರತಿವರ್ಷ ಭಾರತ ಸರಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ವಿವಿಧ ಪಡೆಗಳಲ್ಲಿ ಸಹಾಯಕ ಕಮಾಂಡೆಂಟ್‌ (ಗ್ರೂಪ್‌ ಎ) ಗೆ ನೇಮಕಾತಿ ನಡೆಸಲಾಗುತ್ತದೆ. ಈ ಪಡೆಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್), ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ (ಐಟಿಬಿಪಿ) ಮತ್ತು ಸಶಸ್ತ್ರ ಸೀಮಾ ಬಾಲ್‌ (ಎಸ್‌ಎಸ್ಸಿ) ಸೇರಿವೆ.

ಕಳೆದ ವರ್ಷ ಯುಪಿಎಸ್‌ಸಿ ಸಿಎಪಿಎಫ್ ಪರೀಕ್ಷೆಯ ಮೂಲಕ ಸಹಾಯಕ ಕಮಾಂಡೆಂಟ್‌ಗಳ 323 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಅರ್ಹತೆ ಗಳೇನು?
ಯುಪಿಎಸ್‌ಸಿ ಸಿಎಪಿಎಫ್ (ಅಸಿಸ್ಟೆಂಟ್‌ ಕಮಾಂಡೆಂಟ್‌) ಪರೀಕ್ಷೆಯಲ್ಲಿ ಹಾಜರಾಗಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಥವ ಸಮಾನ ಅರ್ಹತೆಯನ್ನು ಹೊಂದಿರಬೇಕು. ಇದಲ್ಲದೆ ಅಭ್ಯರ್ಥಿಯು 2020ರ ಆಗಸ್ಟ್‌ 1ರಂದು 20 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯು 1995ರ ಆಗಸ್ಟ್‌ 2ರ ಮೊದಲು ಮತ್ತು 2000ರ ಆಗಸ್ಟ್‌ 1ರ ಬಳಿಕ ಜನಿಸಿದವರಾಗಿರಬಾರದು.

Advertisement

Udayavani is now on Telegram. Click here to join our channel and stay updated with the latest news.

Next