Advertisement

ಯುಪಿಎಸ್‌ಸಿ ಟಾಪರ್‌ ನಂದಿನಿ ಅಂಕ ಶೇ.55.3

03:45 AM Jun 06, 2017 | Harsha Rao |

ನವದೆಹಲಿ: ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿರುವ ಕರ್ನಾಟಕದ ನಂದಿನಿ ಕೆ.ಆರ್‌ ಅವರು ಪಡೆದ ಅಂಕಗಳು ಎಷ್ಟೆಂಬುದು ಬಹಿರಂಗವಾಗಿದೆ. ನಂದಿನಿ ಅವರು ಶೇ.55.3 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಶ್ರೇಯಾಂಕ ಗಳಿಸಿದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ.

Advertisement

ಒಟ್ಟು 2,025 ಅಂಕಗಳ ಪೈಕಿ ನಂದಿನಿ 1,120 ಅಂಕಗಳನ್ನು (ಮೈನ್‌ನಲ್ಲಿ 927 ಮತ್ತು ಸಂದರ್ಶನದಲ್ಲಿ 193) ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಎರಡನೇ ಸ್ಥಾನ ಪಡೆದ ಅನ್‌ಮೋಲ್‌ ಶೇರ್‌ ಸಿಂಗ್‌ ಬೇಡಿ 1,105 (ಶೇ.54.56) ಹಾಗೂ ಮೂರನೇ ಸ್ಥಾನ ಪಡೆದ ಗೋಪಾಲಕೃಷ್ಣ ರೋನಂಕಿ 1,101(ಶೇ.54.37) ಅಂಕಗಳನ್ನು ಪಡೆದಿದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ. ಕಳೆದ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದ ಟೀನಾ ಡಾಬಿ ಒಟ್ಟು 1,063 ಅಂಕಗಳನ್ನು (ಶೇ.52.49) ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next