Advertisement

ಯುಪಿಎಸ್‌ಸಿ ಪರೀಕ್ಷೆ: ಅಕ್ಕಲ್‌ಕೋಟೆಯ ಕನ್ನಡಿಗ 249ನೇ ಸ್ಥಾನ ಪಡೆದು ಉತ್ತೀರ್ಣ

02:25 PM Aug 06, 2020 | mahesh |

ಸೊಲ್ಲಾಪುರ: ಕೇಂದ್ರ ಲೋಕ ಸೇವಾ ಆಯೋಗವು 2019ನೇ ಸಾಲಿನಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ಕಲ್‌ಕೋಟೆಯ ಕನ್ನಡಿಗ ಯೋಗೇಶ್‌ ಶಿವ ಕುಮಾರ್‌ ಕಾಪಸೆ ಅವರು 249ನೇ ಸ್ಥಾನವನ್ನು ಪಡೆದು ಉತ್ತೀರ್ಣರಾಗಿದ್ದಾರೆ.

Advertisement

ಅಕ್ಕಲ್‌ಕೋಟೆಯ ರೈತ ಶಿವಕುಮಾರ ಕಾಪಸೆ ಅವರ ಪುತ್ರ ಯೋಗೇಶ್‌ ಕಾಪಸೆ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಯೋಗೇಶ್‌ ಅವರು, ಪ್ರಾಥಮಿಕ ಶಿಕ್ಷಣವನ್ನು ಅಕ್ಕಲ್‌ಕೋಟೆಯ ಲಯನ್ಸ್‌ ಕ್ಲಬ್‌ ಆಫ್‌ ಅಕ್ಕಲ್‌ಕೋಟೆ ಇಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಶಹಾಜಿ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ಬಳಿಕ ಲಾತೂರಿನ ಶಾಹು ಮಹಾವಿದ್ಯಾಲಯದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಅಲ್ಲದೆ ಪುಣೆ ನಗರದ ವಿಶ್ವಕರ್ಮಾ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಜಿನಿಯರ್‌ ಪದವಿ ಪಡೆದುಕೊಂಡ ಅವರು ಹೈದರಾಬಾದ್‌ನಲ್ಲಿ ಏಕಸೆನಚರ್‌ ಸ್ವಾಫ್ಟ್ವೇರ್‌ ಕಂಪೆನಿಯಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದಾರೆ.

ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ ಅವರು. ನಾಲ್ಕನೇ ಬಾರಿ ಬರೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಕ್ಕಲ್‌ಕೋಟೆ ತಾಲೂಕಿನಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮುದಲ ಬಾರಿಗೆ ಯೋಗೇಶ್‌ ಕಾಪಸೆ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅವರ ಸಾಧನೆಯನ್ನು ವಿವಿಧ ಸಂಘಟನೆಗಳು ಅಭಿನಂದಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next