Advertisement

UPSC; ಯುಪಿಎಸ್ಸಿ ಪರೀಕ್ಷೆಯಲ್ಲಿ ಇಶಿತಾ ಕಿಶೋರ್‌ ಟಾಪರ್;‌ 3ನೇ ಪ್ರಯತ್ನದಲ್ಲಿ ಯಶಸ್ಸು…

06:13 PM May 23, 2023 | Team Udayavani |

ನವದೆಹಲಿ: 2022ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ ಮಂಗಳವಾರ (ಮೇ 23) ಪ್ರಕಟಿಸಿದ್ದು, ದೆಹಲಿ ಯೂನಿರ್ವಸಿಟಿಯ ಇಶಿತಾ ಕಿಶೋರ್‌ ಪ್ರಥಮ Rank ಪಡೆದಿದ್ದು, ಮುಂದೆ ಐಎಎಸ್‌ ಮಾಡಬೇಕೆಂಬ ಕನಸನ್ನು ಬಿಚ್ಚಿಟ್ಟಿದ್ದಾರೆ.

Advertisement

ಇದನ್ನೂ ಓದಿ:UPSC ಫಲಿತಾಂಶ: ಕೋಚಿಂಗ್ ಸೆಂಟರ್ ಗೆ ಹೋಗದೆ 390ನೇ ರ‍್ಯಾಂಕ್‌ ಪಡೆದ ಮೈಸೂರಿನ ಪೂಜಾ ಮುಕುಂದ್

ಭಾರತದ ಅತ್ಯಂತ ಪ್ರತಿಷ್ಠಿತ ಸಿವಿಲ್‌ ಎಕ್ಸಾಂಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ಸತತ ಎರಡನೇ ವರ್ಷವೂ ಯುವತಿಯರೇ ಮೇಲುಗೈ ಸಾಧಿಸಿದ್ದು, ಇಶಿತಾ ಸೇರಿದಂತೆ ನಾಲ್ವರು ವಿದ್ಯಾರ್ಥಿನಿಯರು ಟಾಪ್‌ 4ರಲ್ಲಿ ಸ್ಥಾನ ಪಡೆದಿದ್ದಾರೆ.

2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಗರಿಮಾ ಲೋಹಿಯಾ ದ್ವಿತೀಯ ಸ್ಥಾನ, ಉಮಾ ಹರಾಥಿ ಎನ್‌ ತೃತೀಯ ಹಾಗೂ ಸ್ಮೃತಿ ಮಿಶ್ರಾ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಇಂದು ಪ್ರಕಟವಾದ ಯುಪಿಎಸ್‌ ಸಿ (Union public Service commission) ಪರೀಕ್ಷೆಯ ಫಲಿತಾಂಶದಲ್ಲಿ ಒಟ್ಟು 14 ಯುವತಿಯರು ಮತ್ತು 11 ಯುವಕರು ಸೇರಿದಂತೆ ಒಟ್ಟು 25 ಅಭ್ಯರ್ಥಿಗಳು ಟಾಪ್‌ Rankನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

2022ರ ಜೂನ್‌ 5ರಂದು ಯುಪಿಎಸ್ಸಿ ಸಿಎಸ್‌ ಇ ಪರೀಕ್ಷೆ ನಡೆದಿತ್ತು. ಈ ಬಾರಿ ಒಟ್ಟು 11,35,697 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 5,75,735 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಯಾರೀಕೆ ಇಶಿತಾ ಕಿಶೋರ್?‌

ಯುಪಿಎಸ್‌ ಸಿ ಸಿವಿಲ್‌ ಸರ್ವೀಸ್‌ ಪರೀಕ್ಷೆಯ ಟಾಪರ್‌ ಇಶಿತಾ ಕಿಶೋರ್‌ ಎಕಾನಾಮಿಕ್ಸ್‌ ಪದವೀಧರೆಯಾಗಿದ್ದು, ದೆಹಲಿಯ ಶ್ರೀರಾಮ್‌ ಕಾಲೇಜ್‌ ಆಫ್‌ ಕಾಮರ್ಸ್‌ ನಲ್ಲಿ ಪದವಿ ಪಡೆದಿದ್ದರು. ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇಶಿತಾ ಈ ಮೊದಲು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಎದುರಿಸಿದ್ದು, ಇದೀಗ ಮೂರನೇ ಬಾರಿಯ ಪ್ರಯತ್ನದಲ್ಲಿ ಯಶಸ್ಸು ಕಾಣುವ ಮೂಲಕ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.

ಇಶಿತಾ ಕಿಶೋರ್‌ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದ್ದು, ಅವರ ಸಾಧನೆಗಳನ್ನು ಮೆಚ್ಚಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next