Advertisement

ಸಾಧನೆಯ ಕನಸು ಕಾಣಿ: ಖೂಬಾ

06:08 PM Sep 28, 2020 | Suhan S |

ಬೀದರ: ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಗಳು ಸೇರಿ ನಾಗರಿಕ ಪರೀಕ್ಷೆಗಳ ಕುರಿತು ಅರಿವು ಮೂಡಿಸುವ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಕನಸು ಬಿತ್ತುವ ಕಾರ್ಯಕ್ರಮ ರೂಪಿಸಿವೆ ಎಂದು ಸಂಸದ ಭಗವಂತ ಖೂಬಾ ಬಣ್ಣಿಸಿದರು.

Advertisement

ನಗರದ ರಂಗಮಂದಿರದಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಧಕರಾಗುವ ಕನಸು ಕಾಣಬೇಕು. ಅಂತಹ ಕನಸು ಕಾಣುವ ವೇದಿಕೆಯನ್ನು ಜಿಲ್ಲಾಡಳಿತ ಒದಗಿಸಿ ತಮಗೆ ಪ್ರೇರಣೆ ನೀಡಿದೆ. ತುಸುವೂ ಸಮಯವನ್ನು ವ್ಯರ್ಥ ಮಾಡದೇ ಸತತ ಅಧ್ಯಯನ ಮಾಡಿದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಸಲಹೆ ನೀಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ನಾಡುನುಡಿ ಪ್ರೀತಿಸಬೇಕು. ಸಾಮಾಜಿಕ ಕಳಕಳಿ ಹೊಂದಬೇಕು. ಏಕಾಗ್ರತೆ ವಹಿಸಿ, ಸತತ ಓದಿದರೆ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು ಎಂದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಮಾತನಾಡಿ, ಏನಾದರೂ ಆಶಯ ಇದ್ದರೂ ಮಾರ್ಗದರ್ಶನ ಕೊರತೆ ಕಾರಣಕ್ಕೆ ವಿದ್ಯಾರ್ಥಿಗಳು ಹಿಂದೆ ಬೀಳಬಾರದು. ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದರ್ಶನವಿದ್ದಲ್ಲಿ ಪ್ರಯತ್ನ ಫಲಿಸಲು ಸಾಧ್ಯ. ಜಿಲ್ಲೆಯಲ್ಲಿ ಪ್ರತಿವರ್ಷವೂ ಈ ರೀತಿಯ ಕಾರ್ಯಕ್ರಮ ನಡೆಯಬೇಕು ಎಂಬುದು ತಮ್ಮ ಆಶಯವಾಗಿದೆ ಎಂದರು.

ಎಸ್‌ಪಿ ನಾಗೇಶ ಡಿ.ಎಲ್‌. ಮಾತನಾಡಿ, ಜೀವನದಲ್ಲಿ ನಾನು ಏನಾದರು ಮಾಡಬೇಕು ಎನ್ನುವ ಆಕಾಂಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಇರಬೇಕು. ಅಂದಾಗಲೇ ಸಾಧನೆ ಸಾಧ್ಯವಾಗುತ್ತದೆ ಎಂದರು. ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಸಹಾಯಕ ಆಯುಕ್ತರಾದ ಗರೀಮಾ ಪನವಾರ, ಭುವನೇಶ ಪಾಟೀಲ, ಐಎಎಸ್‌ ಅಧಿಕಾರಿಗಳಾದ ರಾಹುಲ್‌ ಶಿಂಧೆ, ಅಶ್ವಿ‌ಜಾ ಬಿ.ವಿ., ಆಕಾಶ, ಐಆರ್‌ಎಸ್‌ ಅಧಿಕಾರಿಗಳಾದ ಅಮರ ಪಾಟೀಲ, ಮೊಹಮ್ಮದ್‌ ನದೀಮ್‌, ಐಪಿಎಸ್‌ ಅಧಿಕಾರಿ ಸಿದ್ಧಾರ್ಥ ಗೋಯಲ್‌, ಕೆಎಎಸ್‌ ಅಧಿಕಾರಿಗಳಾದ ಸಾವಿತ್ರಿ ಸಲಗರ, ನಾಗಯ್ಯ ಹಿರೇಮಠ, ಗಂಗಾದೇವಿ, ಡಾ| ದೇವರಾಜು ಬಿ. ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯಗಳನ್ನು ಮಂಡಿಸಿದರು.

Advertisement

ಆನ್‌ಲೈನ್‌ ಮೂಲಕ ವೀಕ್ಷಣೆಗೆ ಅವಕಾಶ: ಲಿಂಕ್‌ ಬಳಸಿ ಹೆಸರು ನೋಂದಾಯಿಸಿಕೊಂಡಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಂಗಮಂದಿರದಲ್ಲಿ ಆಸನಗಳನ್ನು ಕಾಯ್ದಿರಿಸಲಾಗಿತ್ತು. ಹೊರಾಂಗಣದಲ್ಲಿ ಕೂಡ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಕಾರ್ಯಕ್ರಮವನ್ನು ಅಸಂಖ್ಯ ವಿದ್ಯಾರ್ಥಿಗಳು ಏಕಕಾಲಕ್ಕೆ ಯೂಟೂಬ್‌ ಲಿಂಕ್‌ ಬಳಸಿ ವೀಕ್ಷಿಸಿದ್ದು ವಿಶೇಷವಾಗಿತ್ತು. ಅಪರ ಡಿಸಿ ರುದ್ರೇಶ ಗಾಳಿ, ಅಧಿಕಾರಿಗಳಾದ ಶರಣಬಸಪ್ಪ ಕೋಟಪ್ಪಗೋಳ, ಚಂದ್ರಶೇಖರ, ಸಿದ್ರಾಮ ಸಿಂಧೆ, ಗವಿಸಿದ್ದಪ್ಪ ಹೊಸಮನಿ, ಜ್ಞಾನಸುಧಾ ವಿದ್ಯಾಲಯದ ಮುನೇಶ್ವರ ಲಾಖಾ ಇನ್ನಿತರರು ಪಾಲ್ಗೊಂಡಿದ್ದರು. ಇದೇ ವೇಳೆ ವಿನೂತನ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಹೀನ್‌ ಶಿಕ್ಷಣ ಸಂಸ್ಥೆಯ ಅಬ್ದುಲ್‌ ಖದೀರ್‌ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next