Advertisement
ಬೀದರ್‌ನ ಶಿಂಧೆ (95), ಕೀರ್ತಿ ಕಿರಣ್ ಪೂಜಾರ್ (115), ಟಿ.ಶುಭಮಂಗಳಾ (147),ಎಂ.ಶ್ವೇತಾ (119), ಸಿ. ವಿಂಧ್ಯಾ(160), ಕೃತಿಕಾ (194), ಪೃಥ್ವಿಕ್ ಶಂಕರ್ (211),ಬಿ.ಗೋಪಾಲಕೃಷ್ಣ (265), ಎಚ್.ವಿನೋದ್ ಪಾಟೀಲ್ (294),ಎಂ.ಪುನೀತ್ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346),ಸುದರ್ಶನ ಭಟ್ (434), ಎನ್.ವೈ. ವೃಶಾಂಕ್ (478),ಅಭಿಲಾಷ್ ಶಶಿಕಾಂತ್ ಬದ್ದೂರ್ (531), ನಿಖೀಲ್ ನಿಪ್ಪಾಣಿಕರ್(563), ಟಿ.ಎನ್. ನಿಥನ್‌ರಾಜ್ (575), ಸಚಿನ್(652), ಎಸ್. ಪ್ರೀತಮ್ (654), ಬಿ.ಸಿ. ಹರೀಶ (657), ಆರ್.ವಿಜಯೇಂದ್ರ(666), ಶಿವರಾಜ್ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್ (930), ಪಿ.ಪವನ್ (933), ಮಹೇಶ ವಡ್ಡೆ (958).
ಸಚಿನ್ ಗುಪ್ತಾ 3ನೇ ರ್‍ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯ ವಿದ್ಯಾರ್ಥಿಗಳ ಸಾಧನೆಯನ್ನು ಸ್ಪರ್ಧಾ ಮಿತ್ರದ ನಿರ್ದೇಶಕ ಒಂಕಾರ್ ಪಟೇಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಶಂಕರ್ ಐಎಎಸ್ ಆಕಾಡೆಮಿಯಲ್ಲಿ 2017ನೇ ಸಾಲಿನಲ್ಲಿ 74 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿಯ ನಿರ್ದೇಶಕ ಎಂ.ವೆಂಕಟೇಶ್ ತಿಳಿಸಿದ್ದಾರೆ. ಕಳೆದ ವರ್ಷ ಸುಮಾರು 60 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು.
Related Articles
ಬೆಂಗಳೂರು: ಐಎಎಸ್ ಪರೀಕ್ಷೆಯಲ್ಲಿ ಈ ಬಾರಿ 265ನೇ ರ್‍ಯಾಂಕ್ ಪಡೆದಿರುವ ಬೆಂಗಳೂರಿನ ಗೋವಿಂದರಾಜನಗರದ ಡಾ.ಗೋಪಾಲ್ ಕೃಷ್ಣ ಬಿ.ನಿರಂತರ ಓದು ಹಾಗೂ ಧೃಡ ನಿರ್ಧಾರ ಯಶಸ್ಸಿನ ಗುಟ್ಟು ಎಂದು ಹೇಳಿದರು.
Advertisement
“ಉದಯವಾಣಿ’ ಜತೆ ಮಾತನಾಡಿದ ಅವರು,ವೈದ್ಯನಾಗಿ ಗ್ರಾಮೀಣ ಜನರ ಸಂಕಷ್ಟವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಈ ಕಾರಣದಿಂದ ಸಿವಿಲ್ ಸರ್ವೀಸ್ ಆಯ್ಕೆಮಾಡಿಕೊಂಡೆ ಎಂದರು. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ 2013ರಲ್ಲಿ ಎಂಬಿಬಿಎಸ್ ಪೂರ್ಣಗೊಂಡ ಬಳಿಕ ವೈದ್ಯಾಧಿಕಾರಿಯಾಗಿ ಶ್ರೀನಿವಾಸಪುರ ತಾಲೂಕಿನ ವಗಳಗೆರೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ. ಇದೀಗ ಶಿಮ್ಲಾದಲ್ಲಿರುವ ಇಂಡಿಯನ್ ಅಡಿಟ್ ಅಂಡ್ ಅಸೆಸ್‌ಮೆಂಟ್‌ನಲ್ಲಿ(ಐಎಎಎಸ್)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾಲ್ಕು ವರ್ಷಗಳಿಂದ ಐಎಎಸ್ ಪರೀಕ್ಷೆ ಪಾಸಾಗುವ ಗುರಿಯಿಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದೆ ಎಂದರು.
ಟ್ಯೂಷನ್‌ಗೆ ಹೋಗದೆ ಶುಭ ಮಂಗಳ ಸಾಧನೆಬೆಂಗಳೂರು: ಎರಡನೇ ಪ್ರಯತ್ನದಲ್ಲಿಯೇ 147ನೇ ರ್‍ಯಾಂಕ್ ಪಡೆದಿರುವ ಡಾ.ಟಿ .ಶುಭ ಮಂಗಳ, ಸಾರ್ವಜನಿಕ ಸೇವೆಯ ಬಯಕೆಯಿಂದ ಐಎಎಸ್ ಗುರಿ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸೂತಿ ತಜ್ಞೆಯಾಗಿ ಕೆಲಸ ಮಾಡುತ್ತಿದ್ದು ಅದು ನನ್ನ ನೆಚ್ಚಿನ ವೃತ್ತಿ. ಆದರೆ, ಸಾಮಾಜಿಕ ಬದಲಾವಣೆ, ಸಾರ್ವಜನಿಕ ಸೇವೆಯ ದೃಢ ನಿರ್ಧಾರದಿಂದ ಐಎಎಸ್ ಆಯ್ಕೆ ಮಾಡಿಕೊಂಡೆ. ಪರೀಕ್ಷೆ ತಯಾರಿಗೆ ಎಲ್ಲಿಯೂ ಕೋಚಿಂಗ್‌ಗೆ ಹೋಗಿಲ್ಲ. ಪತಿ ಡಾ.ಟಿ.ವೆಂಕಟೇಶ್ ಅವರು ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಅವರೇ ನನಗೆ ಐಎಎಸ್ ಬರೆಯಲು ಮಾರ್ಗದರ್ಶಕರು. ನಿರಂತರ ಓದಿನಿಂದ ಯಶಸ್ಸು ದಕ್ಕಿದೆ. ಕರ್ನಾಟಕ ಕೇಡರ್ ನಲ್ಲಿಯೇ ಐಎಎಸ್ ಹುದ್ದೆ ದೊರೆಯುವ ನಿರೀಕ್ಷೆಯಿದೆ ಎಂದರು.