Advertisement
ಇಲ್ಲಿನ ರಾ.ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆಯ ಎಂಬ್ಯಾಕ್ ಮೆಂಟ್ ಕಾಮಗಾರಿ ನಡೆಸುತ್ತಿದ್ದು ಸರ್ವಿಸ್ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡದಿರುವುದರಿಂದ ಮಳೆ ನೀರು ಹರಿದು ಹೋಗದೇ ಕಸದರಾಶಿಯ ತೊಟ್ಟಿಯ ಬಳಿ ನೀರು ನಿಂತುಕೊಂಡಿದ್ದು ಇದರಲ್ಲಿ ತ್ಯಾಜ್ಯಗಳು ಕೊಳೆತು ಪರಿಸರದ ಸುತ್ತಮುತ್ತಲು ಕೆಟ್ಟ ವಾಸನೆ ಹರಡಿತ್ತು.
ಇವುಗಳ ಬಗ್ಗೆ ಉದಯವಾಣಿಯಲ್ಲಿ ವರದಿ ಪ್ರಕಟವಾದ ಬಳಿಕ ಸಮಸ್ಯೆಯ ಗಂಭೀರತೆಯನ್ನು ಅರಿತ ಸಂಬಂಧಪಟ್ಟ ಇಲಾಖೆ ತ್ಯಾಜ್ಯಗಳನ್ನು ಪೂರ್ತಿಯಾಗಿ ತೆಗೆಯುವುದರ ಮೂಲಕ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗೆ ಮುಕ್ತಿ ದೊರಕಿವೆ. ವರದಿಗೆ ಶ್ಲಾಘನೆ
ಗಬ್ಬು ನಾರುತ್ತಿರುವ ನಡುವೆ ಸಾರ್ವಜನಿಕರು ವ್ಯಾಪಾರ ವಹಿವಾಟು ನಡೆಸಬೇಕಾದ ಅನಿವಾರ್ಯತೆ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಸ್ವತ್ಛತೆ ಕ್ರಮಕೈಗೊಂಡಿತ್ತು. ಉದಯವಾಣಿ ಜನಪರ ಕಾಳಜಿ ವರದಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.