Advertisement

ಉಪ್ಪೂರು: ನಿವೇಶನ ರಹಿತರ ಪ್ರತಿಭಟನೆ

08:40 AM Mar 22, 2018 | Team Udayavani |

ಬ್ರಹ್ಮಾವರ: ಇಲ್ಲಿನ ಗ್ರಾ.ಪಂ. ನಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚದೇ ಬೇರೆಯವರಿಗೆ ಹಂಚುವ ಹುನ್ನಾರ ವಿರೋಧಿಸಿ, ನಿವೇಶನ ರಹಿತರ ಪ್ರತಿಭಟನೆ ಜರಗಿತು.

Advertisement

ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 700 ರಷ್ಟು ನಿವೇಶನ ರಹಿತ ಕುಟುಂಬಗಳಿದ್ದು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಗ್ರಾಮದ ಸ.ನಂ. 293/1 ಮತ್ತು 232ರಲ್ಲಿ ಅನ್ಯ ಗ್ರಾಮದ 250 ಜನರಿಗೆ ಎ ಶ್ರೇಣಿಯ ಪಟ್ಟಿಯಲ್ಲಿ ನಿವೇಶನ ಹಂಚುವ ಹುನ್ನಾರ ನಡೆದಿದೆ. ಇದು ರಾಜಕೀಯ ತುಷ್ಟೀಕರಣ ಎಂದು ಪ್ರತಿಭಟನಕಾರರು ಆರೋಪಿಸಿದರು. ಉಪ್ಪೂರು ಗ್ರಾಮದ ನಿವೇಶನ ರಹಿತರನ್ನು ಕಡೆಗಣಿಸಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಗ್ರಾಮಕರಣಿಕರ ಗಮನಕ್ಕೆ ತಂದರೂ ಪ್ರಕ್ರಿಯೆ ಮುಂದುವರಿಯುತ್ತಿದೆ. ಉಪ್ಪೂರು ಗ್ರಾಮದ ಎಲ್ಲ ನಿವೇಶನ ರಹಿತ ರನ್ನು ಎ ಶ್ರೇಣಿಯಲ್ಲಿ ಸೇರಿಸಿ ನಿವೇಶನ ಹಂಚಿ, ಅನಂತರ ಅನ್ಯ ಗ್ರಾಮದವರಿಗೆ ಹಂಚಿಕೆ ಮಾಡಬೇಕು. ಈಗ ನಡೆದಿರುವ ಪ್ರಕ್ರಿಯೆ ಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.

ಗ್ರಾಮ ಕರಣಿಕರು, ಪಿಡಿಒ ಮೂಲಕ ಮನವಿ ಸಲ್ಲಿಸಿದರು.  ರಾಜು ಪೂಜಾರಿ ಜಾತಬೆಟ್ಟು, ರಾಘವೇಂದ್ರ ಉಪ್ಪೂರು, ಪ್ರವೀಣ್‌ ಕುಮಾರ್‌, ಪದ್ಮನಾಭ್‌, ಅವಿನಾಶ್‌ ಶೆಟ್ಟಿ, ಅಜಿತ್‌ ಶೆಟ್ಟಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next