ಉಪ್ಪುನೀರಲ್ಲಿ ಹಾಕಿಟ್ಟ ಸೋಳೆಯನ್ನು ಚೆನ್ನಾಗಿ ತೊಳೆದು,ನೀರಿನಲ್ಲಿ 3ಗಂಟೆಗಳ ಕಾಲ ನೆನೆಸಿಡಬೇಕು.ಅದರಲ್ಲಿರುವ ಹೆಚ್ಚಿನ ಉಪಿನಾಂಶ ಕಡಿಮೆಯಾಗುತ್ತದೆ. ಅನಂತರ ನೀರಿನಿಂದ ತೆಗೆದು ಹಿಂಡಿ ಕಾಯಿತುರಿಯೊಂದಿಗೆ ಸೇರಿಸಿ ಹಸಿಮೆಣಸು,ಕರಿಬೇವು,ನೀರುಳ್ಳಿ,ಶುಂಠಿಯನ್ನು ಸೇರಿಸಿ ಸ್ವಲ್ಪ ರುಬ್ಬಿಕೊಳ್ಳಬೇಕು. ಅದಕ್ಕೆ ಅಕ್ಕಿಹಿಟ್ಟು,ಮೆಣಸಿನ ಹುಡಿ ,ಬೇಕಿದ್ದರೆ ಉಪ್ಪು(ಸೋಳೆಯಲ್ಲಿ ಉಪ್ಪು ಇರುವುದರಿಂದ )ಸೇರಿಸಿ ಚೆನ್ನಾಗಿ ಮಿಕ್ಸ… ಮಾಡಿ ರೊಟ್ಟಿಹಿಟ್ಟನ ಹದ ಮಾಡಿ.ರೊಟ್ಟಿ ಮಣೆಯ ಸಹಾಯದಿಂದ ಬಾಳೆಲೆ ಅಥವಾ ಬಟರ್ ಪೇಪರ್‌ನಲ್ಲಿ ಒತ್ತಿ ಕಾವಲಿಗೆಯಲ್ಲಿ ಎರಡೂ ಬದಿ ಬೇಯಿಸಿ.ರೊಟ್ಟಿಯನ್ನು ತುಕುಡಿಯಾಕಾರಕ್ಕೆ ಕತ್ತರಿಸಿ ಎಣ್ಣೆಯಲ್ಲಿ ಕರಿಯಿರಿ.ರುಚಿಯಾದ ಗರಿಗರಿಯಾದ ತುಕುಡಿ ಸವಿಯಲು ಸಿದ್ಧ.
ಮಾಡುವ ವಿಧಾನ
ಉಪ್ಪಿನಸೋಳೆ (ಉಪ್ಪು ನೀರಲ್ಲಿ ಹಾಕಿ ಶೇಖರಿಸಿಟ್ಟ ಹಲಸಿನಕಾಯಿ ಸೊಳೆ)- ಎರಡು ಕಪ್
ಕಾಯಿತುರಿ – ಅರ್ಧ ಕಪ್
ಹಸಿಮೆಣಸು- 2
ಶುಂಠಿ ಚೂರು-2 ಚಮಚ
ಕರಿಬೇವು ಎಲೆ- 3 ಚಮಚ
ನೀರುಳ್ಳಿ – ಅರ್ಧ ಕಪ್
ಮೆಣಸಿನ ಹುಡಿ-ಅರ್ಧ ಚಮಚ
ಜೀರಿಗೆ- ಅರ್ಧ ಚಮಚ
ಉಪ್ಪು- ಉಪ್ಪು
ಅಕ್ಕಿಹಿಟ್ಟು -1 ಕಪ್
- ಪ್ರೇಮಾ. ಎಸ್ ಭಟ್, ಮಂಗಳೂರು