Advertisement

ಉಪ್ಪಿನಂಗಡಿ ಪೊಲೀಸ್‌ ಠಾಣೆ: ಹೊಸ ಕಟ್ಟಡ ನಿಮಾರ್ಣಕ್ಕೆ ಸಿದ್ಧತೆ

08:35 AM Jul 31, 2017 | Harsha Rao |

ಉಪ್ಪಿನಂಗಡಿ: ಇಲ್ಲಿನ ಪೊಲೀಸ್‌ ಠಾಣೆ ಇದ್ದ 137 ವರ್ಷಗಳ ಹಳೆಯ ಕಟ್ಟಡ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ನೆಲಸಮಗೊಂಡು, ಅಲ್ಲಿ ಪೊಲೀಸ್‌ ಠಾಣೆಗೆ ಹೊಸ ಕಟ್ಟಡ ತಲೆಯೆತ್ತಲಿದೆ.
ಈ ಹಳೆಯ ಕಟ್ಟಡ ಸದೃಢವಾಗಿದ್ದರೂ ಹೆಂಚಿನ ಛಾವಣಿ ಮಾತ್ರ ಅಲ್ಲಲ್ಲಿ ಸೋರುತ್ತಿದೆ. ಇಲ್ಲಿಗೆ ಎಸ್‌ಐ ಆಗಿ ಬಂದ ಹಲವರು ಸಾರ್ವಜನಿಕರ ಸಹಕಾರದೊಂದಿಗೆ ಇದನ್ನು ರಿಪೇರಿ ಮಾಡುತ್ತಿದ್ದರು. ಹಲವು ವರ್ಷಗಳಿಂದ ಪೊಲೀಸ್‌ ಠಾಣೆಗೆ ಹೊಸ ಕಟ್ಟಡ ನಿರ್ಮಿಸಿಬೇಕೆನ್ನುವ ಆಗ್ರಹ ಎಲ್ಲರ ದ್ದಾಗಿತ್ತು.  

Advertisement

91 ಲಕ್ಷ ರೂ. ಮಂಜೂರು
ಸುಮಾರು ಆರೇಳು  ತಿಂಗಳ ಹಿಂದೆ ಹೊಸ ಕಟ್ಟಡಕ್ಕಾಗಿ 75 ಲಕ್ಷ ರೂಪಾಯಿ ಮಂಜೂರಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಅನುದಾನ ವಾಪಸ್‌ ಹೋಗಿತ್ತು. ಇದೀಗ ಮತ್ತೆ ಪೊಲೀಸ್‌ ಗೃಹ ಮಂಡಳಿಯಿಂದ 91 ಲಕ್ಷ ರೂಪಾಯಿ ಕಟ್ಟಡಕ್ಕಾಗಿ ಮಂಜೂರಾಗಿದ್ದು, ಇನ್ನು ಒಂದೆರಡು ವಾರದಲ್ಲಿ ಈ ಕಟ್ಟಡ ನೆಲಸಮಗೊಂಡು, ಬಳಿಕ ಅಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಕಟ್ಟಡ ನೆಲಸಮಗೊಂಡು, ಬಳಿಕ ಹೊಸ ಕಟ್ಟಡ ನಿರ್ಮಿಸುವವರೆಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯು ಇಲ್ಲಿಂದ ಸ್ಥಳಾಂತರ ಗೊಳ್ಳಲಿದ್ದು, ಈಗಾಗಲೇ ಸೂಕ್ತ ಕಟ್ಟಡಕ್ಕಾಗಿ ಹುಡುಕಾಟ ನಡೆದಿದೆ. ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಬಾಡಿಗೆ ಕಟ್ಟಡ ವೊಂದನ್ನು ನೋಡಲಾಗಿದ್ದು, ಎಲ್ಲ  ಸರಿಯಾದರೆ ತಾತ್ಕಾಲಿಕ ಅವಧಿಯವರೆಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆ 34ನೇ ನೆಕ್ಕಿಲಾಡಿಗೆ ಸ್ಥಳಾಂತರಗೊಳ್ಳಲಿದೆ.

1880ರಲ್ಲಿ ನಿರ್ಮಿಸಲಾದ ಕಟ್ಟಡ
ಉಪ್ಪಿನಂಗಡಿಯಲ್ಲಿ ಈಗಿರುವ ಪೊಲೀಸ್‌ ಠಾಣಾ ಕಟ್ಟಡ ನಿರ್ಮಾಣವಾಗಿದ್ದು 1880ರಲ್ಲಿ. ಈ ಕಟ್ಟಡದಲ್ಲಿ  ಮೊದಲು ತಾಲೂಕು ಕಚೇರಿಗೆಯ ಕೆಲವು ವಿಭಾಗಗಳು ಕಾರ್ಯಾಚರಿಸುತ್ತಿದ್ದವು. 

1932ರಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಯಲ್ಲಿ  ದೊಡ್ಡ ಪ್ರವಾಹ ಬಂದು ಈ ಕಟ್ಟಡ ಸಹಿತ ಹಲವು  ಮನೆಗಳು ನೀರಿನಲ್ಲಿ    ಮುಳುಗಡೆ ಯಾಗಿದ್ದರಿಂದ ಉಪ್ಪಿನಂಗಡಿಯನ್ನು ನೆರೆಪೀಡಿತ ಪ್ರದೇಶವೆಂದು ಘೋಷಿಸಿದ ಸರಕಾರವು ತಾಲೂಕು ಕೇಂದ್ರವನ್ನಾಗಿ ಪುತ್ತೂರನ್ನು ಆರಿಸಿಕೊಂಡಿತು. ಬಳಿಕ ಅಂದಿನ ಗೃಹ ಸಚಿವರು ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಆರಂಭಿಸಲು ಆದೇಶ ನೀಡಿದರು. ಇದರಿಂದಾಗಿ 15.5.56ರಲ್ಲಿ  ಈ ಕಟ್ಟಡದಲ್ಲಿ  ಪೊಲೀಸ್‌ ಠಾಣೆಯನ್ನು ಆರಂಭಿಸಲಾಯಿತು. 

ಪುತ್ತೂರು ಗ್ರಾಮಾಂತರ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿಯೂ ಇಲ್ಲಿಗೆ ಬಂತು. ಅಬ್ಟಾಸ್‌ ಅಲಿ ಅವರು ಆರಂಭದ ಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದರೆ, ಜಿ.ಬಿ. ಡಿ’ಸೋಜಾ ಪ್ರಾರಂಭದಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. 
ಉಪ್ಪಿನಂಗಡಿ ಪೊಲೀಸ್‌ ಠಾಣೆಯು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ಹೀಗೆ ನಾಲ್ಕು  ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡ 33 ಗ್ರಾಮಗಳನ್ನು ಹಾಗೂ ದ.ಕ. ಜಿಲ್ಲಾ ಗಡಿಯಾದ ಶಿರಾಡಿ ಯಿಂದ ಬಂಟ್ವಾಳ ತಾಲೂಕಿನ ಅಮೈವರೆಗೆ ಸುಮಾರು 55 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯನ್ನು ಒಳಗೊಂಡಿದೆ. ಬಳಿಕದ ದಿನಗಳಲ್ಲಿ ಹಲವು ಎಸ್‌ಐಗಳನ್ನು, ವೃತ್ತ ನಿರೀಕ್ಷಕರನ್ನು ಈ ಠಾಣೆ ಕಂಡಿದೆ.

Advertisement

ಬಂಟ್ವಾಳ ಠಾಣೆಯಿಂದ ಕಳೆದ ಸುಮಾರು 3 ತಿಂಗಳುಗಳ ಹಿಂದೆ ಉಪ್ಪಿ ನಂಗಡಿ ಪೊಲೀಸ್‌ ಠಾಣಾ ಎಸ್‌ಐ ಆಗಿ ವರ್ಗಾವಣೆ ಹೊಂದಿ ಬಂದ ನಂದಕುಮಾರ್‌ ಅವರು ಸಾರ್ವಜನಿಕರ ಸಹಕಾರದಿಂದ ಪೊಲೀಸ್‌ ಠಾಣೆಯಲ್ಲಿ ಹಲವಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಿ ದ್ದರು. ಠಾಣೆಯಲ್ಲಿದ್ದ ಹಳೆಯ ಕಾಲದ ಕುರ್ಚಿ, ಬೆಂಚುಗಳನ್ನು ತೆಗೆದು ಆಧುನಿಕ ಶೈಲಿಯ ಪೀಠೊಪಕರಣ ಅಳವಡಿಸಿದರು. ನೆಲಕ್ಕೆ ಟೈಲ್ಸ್‌ ಹಾಕಿಸಿದ್ದರು. ಮಳೆಗಾಲದಲ್ಲಿ ಸೋರುವುದಕ್ಕೂ ಮುಕ್ತಿ ನೀಡಿದ್ದರು. ಆದರೆ ಈ ಕಟ್ಟಡ ನೆಲಸಮಗೊಳ್ಳುವುದರಿಂದ ಈ ಸೌಂದರ್ಯ ಮಾತ್ರ ಹೆಚ್ಚು ದಿನ ಉಳಿಯದೇ ಕಟ್ಟಡದೊಂದಿಗೆ ಮರೆಯಾ ಗಲಿದೆ.

1932ರಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಯಲ್ಲಿ  ದೊಡ್ಡ ಪ್ರವಾಹ ಬಂದು ಈ ಕಟ್ಟಡ ಸಹಿತ ಹಲವು ಮನೆಗಳು ನೀರಿನಲ್ಲಿ ಮುಳುಗಡೆ ಯಾಗಿದ್ದರಿಂದ ಉಪ್ಪಿನಂಗಡಿಯನ್ನು ನೆರೆಪೀಡಿತ ಪ್ರದೇಶವೆಂದು ಘೋಷಿಸಿದ ಸರಕಾರವು ತಾಲೂಕು ಕೇಂದ್ರವನ್ನಾಗಿ ಪುತ್ತೂರನ್ನು ಆರಿಸಿಕೊಂಡಿತು. ಬಳಿಕ ಅಂದಿನ ಗೃಹ ಸಚಿವರು ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಆರಂಭಿಸಲು ಆದೇಶ ನೀಡಿದರು. ಇದರಿಂದಾಗಿ 15.5.56ರಲ್ಲಿ  ಈ ಕಟ್ಟಡದಲ್ಲಿ  ಪೊಲೀಸ್‌ ಠಾಣೆಯನ್ನು ಆರಂಭಿಸಲಾಯಿತು. 

ಪುತ್ತೂರು ಗ್ರಾಮಾಂತರ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿಯೂ ಇಲ್ಲಿಗೆ ಬಂತು. ಅಬ್ಟಾಸ್‌ ಅಲಿ ಅವರು ಆರಂಭದ ಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದರೆ, ಜಿ.ಬಿ. ಡಿ’ಸೋಜಾ ಪ್ರಾರಂಭದಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. 
ಉಪ್ಪಿನಂಗಡಿ ಪೊಲೀಸ್‌ ಠಾಣೆಯು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ಹೀಗೆ ನಾಲ್ಕು  ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡ 33 ಗ್ರಾಮಗಳನ್ನು ಹಾಗೂ ದ.ಕ. ಜಿಲ್ಲಾ ಗಡಿಯಾದ ಶಿರಾಡಿ ಯಿಂದ ಬಂಟ್ವಾಳ ತಾಲೂಕಿನ ಅಮೈವರೆಗೆ ಸುಮಾರು 55 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯನ್ನು ಒಳಗೊಂಡಿದೆ. ಬಳಿಕದ ದಿನಗಳಲ್ಲಿ ಹಲವು ಎಸ್‌ಐಗಳನ್ನು, ವೃತ್ತ ನಿರೀಕ್ಷಕರನ್ನು ಈ ಠಾಣೆ ಕಂಡಿದೆ.

ಬಂಟ್ವಾಳ ಠಾಣೆಯಿಂದ ಕಳೆದ ಸುಮಾರು 3 ತಿಂಗಳುಗಳ ಹಿಂದೆ ಉಪ್ಪಿ ನಂಗಡಿ ಪೊಲೀಸ್‌ ಠಾಣಾ ಎಸ್‌ಐ ಆಗಿ ವರ್ಗಾವಣೆ ಹೊಂದಿ ಬಂದ ನಂದಕುಮಾರ್‌ ಅವರು ಸಾರ್ವಜನಿಕರ ಸಹಕಾರದಿಂದ ಪೊಲೀಸ್‌ ಠಾಣೆಯಲ್ಲಿ ಹಲವಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಿ ದ್ದರು. ಠಾಣೆಯಲ್ಲಿದ್ದ ಹಳೆಯ ಕಾಲದ ಕುರ್ಚಿ, ಬೆಂಚುಗಳನ್ನು ತೆಗೆದು ಆಧುನಿಕ ಶೈಲಿಯ ಪೀಠೊಪಕರಣ ಅಳವಡಿಸಿದರು. ನೆಲಕ್ಕೆ ಟೈಲ್ಸ್‌ ಹಾಕಿಸಿದ್ದರು. 

ಮಳೆಗಾಲದಲ್ಲಿ ಸೋರುವುದಕ್ಕೂ ಮುಕ್ತಿ ನೀಡಿದ್ದರು. ಆದರೆ ಈ ಕಟ್ಟಡ ನೆಲಸಮಗೊಳ್ಳುವುದರಿಂದ ಈ ಸೌಂದರ್ಯ ಮಾತ್ರ ಹೆಚ್ಚು ದಿನ ಉಳಿಯದೇ ಕಟ್ಟಡದೊಂದಿಗೆ ಮರೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next