Advertisement

Uppinangady: ಸ್ಕೂಟರ್‌ಗೆ ಪಿಕಪ್‌ ಢಿಕ್ಕಿ: ಓರ್ವ ಸಾವು

08:23 PM Jul 10, 2023 | Team Udayavani |

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ಸ್ಕೂಟರ್‌ ವೊಂದಕ್ಕೆ ಪಿಕಪ್‌ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಅಬೂಬಕ್ಕರ್‌ (70) ಸಾವನ್ನಪ್ಪಿ ಸಹ ಸವಾರೆ ಪತ್ನಿ ಬೀಪಾತುಮ್ಮ (60) ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.

Advertisement

ಉರುವಾಲು ಗ್ರಾಮದ ಶುಂಠಿಪಳಿಕೆ ನಿವಾಸಿ ಅಬೂಬಕ್ಕರ್‌ ಕಾರ್ಯ ನಿಮಿತ್ತ ತನ್ನ ಪತ್ನಿಯೊಂದಿಗೆ ಸ್ಕೂಟರ್‌ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಿಕಪ್‌ ವಾಹನ ಢಿಕ್ಕಿ ಹೊಡೆಯಿತು.

ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಅಬೂಬಕ್ಕರ್‌ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ಸಾಗಿಸುವ ಯತ್ನದಲ್ಲೇ ಸಾವನ್ನಪ್ಪಿದರು. ತೀವ್ರ ಗಾಯಗೊಂಡ ಬೀಪಾತುಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು ಸಂಚಾರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next