Advertisement

ಉಪ್ಪಿನಂಗಡಿ ನಾಡಕಚೇರಿ ಸ್ಥಳಾಂತರ ಸನ್ನಿಹಿತ 

11:11 AM Nov 29, 2018 | Team Udayavani |

ಉಪ್ಪಿನಂಗಡಿ: ಅಪಾಯದ ಅಂಚಿನಲ್ಲಿದ್ದ ಹೋಬಳಿ ಮಟ್ಟದ ನಾಡ ಕಚೇರಿಗೆ ಕೊನೆಗೂ ಮುಕ್ತಿ ದೊರೆಯುವುದು ನಿಚ್ಚಳಗೊಂಡಿದೆ. ಈ ಕಟ್ಟಡ ತೀರಾ ಶಿಥಿಲವಾಗಿದ್ದರೂ ಅದರಲ್ಲೇ ಸಿಬಂದಿ ಕೆಲಸ ನಿರ್ವಹಿಸುತ್ತಿರುವ ಕುರಿತು ಉದಯವಾಣಿ ‘ಸುದಿನ’ ಮೂರು ಬಾರಿ ಸಚಿತ್ರ ವರದಿ ಪ್ರಕಟಿಸಿತ್ತು. ಕಂದಾಯ ಅಧಿಕಾರಿಗಳು ಆಗಲೇ ಬದಲಿ ಕಟ್ಟಡಕ್ಕಾಗಿ ಹುಡುಕಾಟ ಆರಂಭಿಸಿದ್ದರು. ಆದರೆ, ವ್ಯವಸ್ಥಿತವಾದ ಕಟ್ಟಡ ಸಿಗದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು. ಪ್ರಸ್ತುತ ಪುತ್ತೂರು ಉಪವಿಭಾಗಾಧಿಕಾರಿ ಅವರ ಲಿಖಿತ ಮನವಿ ಮೇರೆಗೆ ತಾತ್ಕಾಲಿಕ ಸ್ಥಳಾಂತರದ ಕೋರಿಕೆಯನ್ನು ಗ್ರಾ.ಪಂ. ಗೆ ಸಲ್ಲಿಸಲಾಗಿದ್ದು, ಪಂಚಾಯತ್‌ ಆಡಳಿತವು ಶರತ್ತು ವಿಧಿಸಿ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಸ್ಥಳಾಂತರ ನಡೆಸುವ ಸಾಧ್ಯತೆ ಇದೆ.

Advertisement

ನಾಡಕಚೇರಿಯ ಗೋಡೆಗಳು ಬಿರುಕು ಬಿಟ್ಟು ಛಾವಣಿ ಕುಸಿಯುವ ಹಂತದಲ್ಲಿದ್ದು, ಕರ್ತವ್ಯ ನಿಭಾಯಿಸುವ ಸಿಬಂದಿ ಹಾಗೂ ಕೆಲಸ – ಕಾರ್ಯಗಳಿಗೆ ಬರುವ ಸಾರ್ವಜನಿಕರು ಜೀವ ವಿಮೆ ಮಾಡಿಸಿಯೇ ಒಳಗೆ ಬರುವ ಪರಿಸ್ಥಿತಿ ಇತ್ತು. ಶಿರಾಡಿ, ಉದನೆ, ಇಚ್ಲಂಪಾಡಿ, ನೆಲ್ಯಾಡಿ, ಕೌಕ್ರಾಡಿ, ಗೋಳಿತೊಟ್ಟು, ಅಲಂಕಾರು, ಬಜತ್ತೂರು, ಉಪ್ಪಿನಂಗಡಿ, 34ನೇ ನೆಕ್ಕಿಲಾಡಿ, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಬನ್ನೂರು ಸಹಿತ 26 ಗ್ರಾಮಗಳ ವ್ಯಾಪ್ತಿ ಹೊಂದಿದ್ದು, ನಿತ್ಯ ಆಧಾರ್‌, ಪಡಿತರ ಚೀಟಿ, ಆದಾಯ, ಜಾತಿ ದೃಢೀಕರಣಗಳಿಗೆ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಮಳೆಗಾಲದಲ್ಲಿ ನೆರೆ ಪರಿಸ್ಥಿತಿ ಇರುವ ಕಾರಣ ಇಲ್ಲಿ ಕಂಟ್ರೋಲ್‌ ರೂಮ್‌ ಸ್ಥಾಪಿಸಲಾಗುತ್ತದೆ. ರಾತ್ರಿ ಪಾಳಿಯಲ್ಲಿ ಈ ಹಳೆಯ ಕಚೇರಿಯಲ್ಲಿ ಕೆಲಸ ಮಾಡಲು ಗ್ರಾಮ ಕರಣಿಕರು ಹಿಂಜರಿಯುತ್ತಿದ್ದ ಕಾರಣ, ಗ್ರಾ.ಪಂ. ಕಟ್ಟಡದಲ್ಲಿರುವ ಗ್ರಾಮ ಕರಣಿಕರ ಕಚೇರಿಯಲ್ಲೇ ವ್ಯವಸ್ಥೆ ಮಾಡಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next