ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿಯಲ್ಲಿ ವಾಸವಾಗಿದ್ದ ತಾಯಿ ಮತ್ತು ಮಗ ಜೂ. 7ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನಿಡಲಾಗಿದೆ.
ದಿ| ರವೀಂದ್ರನ್ ಅವರ ಮಗ ಜೋಜೋ ಟಿ.ಕೆ. ದೂರು ನೀಡಿದ್ದು ಪತ್ನಿ ಚಂದ್ರಕಲಾ (37) ಮತ್ತು ಕಿರಿಯ ಮಗ ಶನೀಶ್ ಜೂ. 7ರಂದು ಮನೆ ಬಿಟ್ಟು ಹೋದವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾದ ಚಂದ್ರಕಲಾ ಅವರಿಗೆ ಮಗಳು ಶ್ರೇಯಾ (13) ಮಗ ಶ್ರೇಯಸ್ (11) ಎಂಬ ಇನ್ನಿಬ್ಬರು ಮಕ್ಕಳಿದ್ದು, ಅವರು ಶಾಲೆಗೆ ಹಾಗೂ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಹಾಸನಕ್ಕೆ ಹೋಗಿ ಬರುವೆನೆಂದು ಪತಿಗೆ ತಿಳಿಸಿದಾಗ ಮನೆಗೆ ಬಂದ ಬಳಿಕ ಹೋಗಬೇಕೆಂದು ಪತಿ ಸೂಚಿಸಿದ್ದರೆನ್ನಲಾಗಿದೆ. ಆದರೂ ಪತಿಯ ಮಾತನ್ನು ಕೇಳದೇ ಕಿರಿಯ ಮಗ ಶನೀಶ್‌ನೊಂದಿಗೆ ಮನೆ ಬಿಟ್ಟು ಹೋದಾಕೆ ವಾರ ಕಳೆದರೂ ಹಿಂದಿರುಗಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.