Advertisement
ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮಾತನಾಡಿ, ದೇವಾಲಯಗಳು ಸಂಸ್ಕಾರ, ಮಾನಸಿಕನೆಮ್ಮದಿಯನ್ನು ನೀಡುವ ಕೇಂದ್ರ ಗಳಾಗುವುದರೊಂದಿಗೆ ಮದುವೆ, ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ವೇದಿಕೆಯೊದಗಿಸಿದಾಗ ಅಲ್ಲಿ ಪುಣ್ಯ ಸಂಪಾದನೆಯೊಂದಿಗೆ ಪರಸ್ಪರ ಸಂಬಂಧಗಳನ್ನು ಬೆಸೆಯುವ ಕಾರ್ಯವಾಗುತ್ತದೆ ಎಂದು ಹೇಳಿದರು. ಸಮ್ಮಾನ: “ನಮ್ಮೂರು -ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷ ಜತೀಂದ್ರ ಶೆಟ್ಟಿ, ಗುತ್ತಿಗೆದಾರ ಆನಂದ ಬಿ.ಕೆ., ಎಂಜಿನಿ ಯರ್ ಸೀತಾರಾಮ ಆಚಾರ್ಯ, ವಿದ್ಯುತ್ ಗುತ್ತಿಗೆದಾರ ಗುಣಕರ ಅಗ್ನಾಡಿ ಅವರನ್ನು ಸಮ್ಮಾನಿಸಲಾಯಿತು.
ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಮಹೇಂದ್ರವರ್ಮ, ಗೋಪಾಲ ಹೆಗ್ಡೆ, ಮುರಳೀಧರ ರೈ ಮಠಂತಬೆಟ್ಟು, ಕೈಲಾರು ರಾಜಗೋಪಾಲ್ ಭಟ್, ಲೊಕೇಶ್ ಬೆತ್ತೋಡಿ, ಚಂದ್ರಹಾಸ ಶೆಟ್ಟಿ, ಅರುಣ್ ಕುಮಾರ್ ಬಿ.ಕೆ., ಅಶ್ರಫ್ ಬಸ್ತಿಕ್ಕಾರ್, ಉಪಸ್ಥಿತರಿದ್ದರು. ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುನಾಥ್ ರೈ ಅಲಿಮಾರ್ ಸ್ವಾಗತಿಸಿ ದರು. ಕೃಷ್ಣರಾವ್ ಜಿ. ವಂದಿಸಿದರು. ಡಾ| ರಾಜಾರಾಮ್ ಕೆ.ಬಿ. ಕಾರ್ಯಕ್ರಮ ನಿರ್ವಹಿಸಿದರು.
Related Articles
ಅಧ್ಯಕ್ಷತೆ ವಹಿಸಿದ್ದ ಶಾಸಕಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಉಪ್ಪಿನಂಗಡಿಯು ಕಾಶಿ ಸಮಾನ ಕ್ಷೇತ್ರ. ಕುಮಾರಧಾರಾ – ನೇತ್ರಾವತಿ ಸಂಗಮ ತಾಣವಾದ ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವನ್ನಾಗಿಯೂ ರೂಪಿಸಬೇಕು ಎನ್ನುವುದು ನನ್ನ ಕನಸು. ಕೂಡಲ ಸಂಗಮ ಶೈಲಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುವೆ ಎಂದರು.
Advertisement