ಉಪ್ಪಿನಂಗಡಿ : ಜೇಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ಯೋಧರ ಪತ್ನಿಯರಿಗೆ ಸಮ್ಮಾನ 34ನೇ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ಜರಗಿತು.
ಯೋಧ ಉಪ್ಪಿನಂಗಡಿಯ ರಾಮನಗರದ ವಿಶ್ವನಾಥ್ ಶೆಣೈ ಅವರ ಪತ್ನಿ ವೀಣಾ ಹಾಗೂ ಯೋಧ ನಟ್ಟಿಬೈಲ್ ಯಶವಂತ್ ಹೆಗ್ಡೆ ಅವರ ಪತ್ನಿ ತುಳಸಿ ಯಶವಂತ್ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಕಾಮಾಕ್ಷಿ ಗೋಪಾಲ ಹೆಗ್ಡೆ, ಜೆಎಫ್ಡಿ ಶಿವಕುಮಾರ್ ಬಾರಿತ್ತಾಯ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಜೇಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ ವಿನೀತ್ ಶಗ್ರಿತ್ತಾಯ ಮಾತನಾಡಿ, ಶತ್ರುವಿನ ಬಂದೂಕಿಗೆ ಎದೆಯೊಡ್ಡಿ ನಮ್ಮ ವೀರ ಸೈನಿಕರು ದೇಶವನ್ನು ಕಾಯುತ್ತಿರುವುದರಿಂದ ನಮಗೆ ಉತ್ತಮ ಬದುಕು ಲಭ್ಯವಾಗುವಂತಾಗಿದೆ. ಅಂತಹ ಯೋಧರನ್ನು, ಅವರ ಪತ್ನಿಯರನ್ನು ಗೌರವಿಸುವುದು ಹೆಮ್ಮೆಯ ವಿಷಯ ಎಂದರು.
ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಸಮಿತಿ ಸದಸ್ಯ ಎನ್. ಗೋಪಾಲ್ ಹೆಗ್ಡೆ, ತಾ.ಪಂ. ಮಾಜಿ ಸದಸ್ಯ ಉಮೇಶ್ ಶೆಣೈ ಎನ್., ಯಕ್ಷ ಸಂಗಮದ ಸಂಚಾಲಕ ರವೀಶ್ ಎಚ್.ಟಿ., ಜೆಸಿಐ
ನೆಕ್ಕಿಲಾಡಿಯ ನಿಕಟ ಪೂರ್ವಾಧ್ಯಕ್ಷೆ ಅಮಿತಾ ಹರೀಶ್, ಜೇಸಿ ಸದಸ್ಯರಾದ ಜಯಪ್ರಕಾಶ್ ಜೋಗಿತ್ತಾಯ, ವೈಶಾಲಿ ಕುಂದರ್, ಉಪ್ಪಿನಂಗಡಿ ಜೇಸಿಐಯ ನಿಕಟ ಪೂರ್ವಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಜೇಸಿಐ ನೆಕ್ಕಿಲಾಡಿ ಘಟಕದ ಕಾರ್ಯದರ್ಶಿ ರಮೇಶ್ ಸುಭಾಶ್‌ನಗರ ವಂದಿಸಿದರು.