ಉಪ್ಪಿನಂಗಡಿ: ನೆಲ್ಯಾಡಿಯಿಂದ ಸೋಮವಾರ ಹೊರಟು ಉಪ್ಪಿನಂಗಡಿ ಯಲ್ಲಿ ತಂಗಿದ್ದ ಮೂರು ದಿನಗಳ ‘ಹೆದ್ದಾರಿ ಪೂರ್ಣಗೊಳಿಸಿ ಜನರ ಪ್ರಾಣ ಉಳಿಸಿ’ ಕಾಂಗ್ರೆಸ್ ಪಾದಯಾತ್ರೆಗೆ ಮಂಗಳವಾರ ಮುಂಜಾನೆ ಚಾಲನೆ ನೀಡಲಾಯಿತು.
ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು ಪೂರ್ವಾಹ್ನ 10 ಗಂಟೆ ಸುಮಾರಿಗೆ ಹೆಜ್ಜೆ ಹಾಕತೊಡಗಿದರು. ಪಾದಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ತೆಂಗಿನಕಾಯಿ ಒಡೆದು, ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್, ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಭಾಸ್ಕರ ಮೊಲಿ, ಸದಸ್ಯ ರವೂಫ್, ಕೆಪಿಸಿಸಿ ಸದಸ್ಯ ಡಾ| ರಘು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಕೆ.ಕೆ. ಶಾಹುಲ್ ಹಮೀದ್, ಎಂ.ಎಸ್. ಮಹಮ್ಮದ್, ತಾ.ಪಂ. ಸದಸ್ಯರಾದ ಫಝಲ್ ಕೋಡಿಂಬಾಳ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ, ಸುಳ್ಯ ಬ್ಲಾಕ್ ಅಧ್ಯಕ್ಷ ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ, ಸದಸ್ಯೆ ಸರಸ್ವತಿ ಕಾಮತ್ ಸುಳ್ಯ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಎ.ಸಿ. ಜಯರಾಜ್, ವಿಜಯಕುಮಾರ್ ಸೊರಕೆ, ಉಲ್ಲಾಸ್ ಕೋಟ್ಯಾನ್, ಎಚ್.ಕೆ. ಇಲ್ಯಾಸ್, ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಸೂತ್ರಬೆಟ್ಟು ಜಗನ್ನಾಥ ರೈ, ಸ್ವರ್ಣಲತಾ ಹೆಗ್ಡೆ, ಜೋಕಿಂ ರೆಬೆಲ್ಲೋ, ಬೆಳ್ತಂಗಡಿ ಕಾಂಗ್ರೆಸ್ ಮುಖಂಡರಾದ ಎ.ಸಿ. ಮ್ಯಾಥ್ಯು, ಸದಾನಂದ ಮಡಪ್ಪಾಡಿ, ರಜಾಕ್ ಬಸ್ತಿಕ್ಕಾರ್, ಅಬ್ದುಲ್ ರಜಾಕ್ ತೆಕ್ಕಾರು, ಮೈಮೂನಾ, ಯೂಸುಫ್ ಪೆದಮಲೆ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಉಪಾಧ್ಯಕ್ಷ ಅಶ್ರಫ್ ಬಸ್ತಿಕ್ಕಾರ್, ದೇವದಾಸ್ ರೈ, ಯು.ಕೆ. ಇಬ್ರಾಹಿಂ, ಕೃಷ್ಣ ರಾವ್ ಅರ್ತಿಲ, ನಝೀರ್ ಮಠ, ಅಸ್ಕರ್ ಆಲಿ, ಮಹಮ್ಮದ್ ಕೆಂಪಿ, ಎಂ. ವಿಶ್ವನಾಥ, ಎ. ರಘುನಾಥ ರೈ, ಕೃಷ್ಣ ರಾವ್ ಅರ್ತಿಲ, ಡಾ| ರಾಜಾರಾಮ್, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ರಾಧಾಕೃಷ್ಣ ನಾಯ್ಕ, ಸವಿತಾ ಹರೀಶ್ ಉಪಸ್ಥಿತರಿದ್ದರು.
ಪಾನೀಯ, ಹಣ್ಣು, ಊಟ
ಪಾದಯಾತ್ರೆ ಕರ್ವೇಲ್ ತಲುಪಿದಾಗ ಅಲ್ಲಿನ ಗ್ರಾ.ಪಂ. ಸದಸ್ಯರಾದ ಅಬ್ದುಲ್ ರಜಾಕ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬರಮಾಡಿಕೊಂಡು ಪಾನೀಯ ವಿತರಿಸಿದರು. ಪೆರ್ನೆಯಲ್ಲಿ ಸಿ.ಎ. ಬ್ಯಾಂಕ್ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ನಿರ್ದೇಶಕರಾದ ಅಬ್ದುಲ್ಲ ಶಾಲಿಮಾರ್, ಉಮಾನಾಥ ಶೆಟ್ಟಿ, ಸುನೀಲ್ ಪಿಂಟೋ ನೇತೃತ್ವದಲ್ಲಿ ಪಾನೀಯ ಮತ್ತು ಕಲ್ಲಂಗಡಿ ವಿತರಿಸಿದರು. ಸತ್ತಿಕಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆ ಮಾಣಿಗೆ ತಲುಪುವ ಪಾದಯಾತ್ರಿಗಳು, ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.