Advertisement

ಕಾರುಗಳೆರಡು ಢಿಕ್ಕಿ: 6 ಮಂದಿಗೆ ಗಾಯ

11:52 PM May 20, 2023 | Team Udayavani |

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಕಾರುಗಳೆರಡು ಪರಸ್ಪರ ಢಿಕ್ಕಿ ಹೊಡೆದು ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ.

Advertisement

ಬೆಳ್ತಂಗಡಿಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಶಿಫ್ಟ್ ಕಾರಿಗೆ ಎದುರುಗಡೆಯಿಂದ ಬಂದ ಮಾರುತಿ 800 ಕಾರು ಪರಸ್ಪರ ಢಿಕ್ಕಿ ಹೊಡೆದಿದೆ.

ಶಿಫ್ಟ್ ಕಾರಿನ ಚಾಲಕ ಮಹಾಬಲ ಶೆಟ್ಟಿ, ಕಾರಿನಲ್ಲಿದ್ದ ಮನ್ವಿತಾ, ಮಮತಾ, ಆಶಾ, ಅನ್ವಿತಾ ಮತ್ತು ಮಾರುತಿ ಕಾರಿನಲ್ಲಿದ್ದ ಅಣ್ಣಿ ಗೌಡ ಎಂಬವರು ಗಾಯಗೊಂಡಿದ್ದು, ಗಾಯಾಳುಗಳೆಲ್ಲರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next