ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಒಂದನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಅಬ್ರಾರ್ ಎನ್.ಎ. (6) ರಕ್ತ ಸಂಬಂಧಿ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದಾನೆ.
ಅಬೂಬಕ್ಕರ್ ಮತ್ತು ಸಂಶಾದ್ ಕರುವೇಲು ದಂಪತಿ ಪುತ್ರನಾದ ಆತ ರಕ್ತ ಸಂಬಂಧಿ ಕಾಯಿಲೆಯಿಂದ ಉಂಟಾದ ಅನಾರೋಗ್ಯಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ವಿದ್ಯಾರ್ಥಿಯ ಅಕಾಲಿಕ ಮರಣದ ಕಾರಣಕ್ಕೆ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ವಿದ್ಯಾಲಯಕ್ಕೆ ಶನಿವಾರ ರಜೆ ಸಾರಲಾಯಿತು.
ಸಾಲಬಾಧೆ: ವಿಷ ಸೇವಿಸಿ ಆತ್ಮಹತ್ಯೆ
ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಕೆವಾrಜೆ ಎನ್ನುವಲ್ಲಿ ಸಾಲಬಾಧೆಯಿಂದ ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನ. 4ರಂದು ಮೃತಪಟ್ಟಿದ್ದಾರೆ.
Related Articles
ಚಾರ್ಮಾಡಿ ಗ್ರಾಮದ ಕೆವಾrಜೆ ನಿವಾಸಿ ಯಶೋಧರ (39) ಮೃತಪಟ್ಟವರು. ಅವರು ಸ್ವ ಸಹಾಯ ಸಂಘ ಹಾಗೂ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲಬಾಧೆ ತಾಳಲಾರದೆ ಅ. 31ರಂದು ಮನೆಯ ಅಂಗಳದಲ್ಲಿ ವಿಷ ಸೇವಿಸಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.
ಪತ್ನಿ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯಶೋಧರ ಅವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.