ಉಪ್ಪಿನಂಗಡಿ: ನದಿಗಳನ್ನು ತ್ಯಾಜ್ಯ ಮುಕ್ತಗೊಳಿಸಿ, ಪ್ರಾಕೃತಿಕ ಸಂಪತ್ತಾಗಿರುವ ನದಿಗಳಲ್ಲಿ ಶುದ್ಧ ನೀರು ಹರಿಯುವಂತೆ ಮಾಡಿ, ಮನುಷ್ಯನ ಸಹಿತ ಸಕಲ ಜೀವರಾಶಿಗಳಿಗೆ ಜಲಮೂಲವಾಗಿರುವ ನದಿಗಳ ಪಾವಿತ್ರ್ಯ ಉಳಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಎಂದು ಸಂದೇಶ ಸಾರುವ ಅಭಿಯಾನವನ್ನು ಶನಿವಾರ ಇಲ್ಲಿ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧೀನದ ನೆಲ-ಜಲ ಸಂರಕ್ಷಣ ಸಮಿತಿ ಆಶ್ರಯದಲ್ಲಿ ನಡೆಸಲಾಯಿತು.
ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಅಧ್ಯಕ್ಷ ಅಬ್ರಹಾಂ ವರ್ಗಿàಸ್, ನೆಲ ಜಲ ಸಂರಕ್ಷಣ ಸಮಿತಿಯ ಅಧ್ಯಕ್ಷ ಡಾ| ಕೈಲಾರ್ ರಾಜಗೋಪಾಲ ಭಟ್, ಪ್ರಧಾನ ಕಾರ್ಯದರ್ಶಿ ವಂದನಾ, ಪಂಚಾಯತ್ ಕಾರ್ಯ ದರ್ಶಿ ಮರಿಯಮ್ಮ ಜಾಥಾಕ್ಕೆ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನೇತ್ರಾವತಿ ಹಾಗೂ ಕುಮಾರಧಾರಾ ನದಿ ಒಡಲನ್ನು ಸ್ವತ್ಛಗೊಳಿಸಲಾಯಿತು.
ನೆಲ ಜಲ ಸಂರಕ್ಷಣೆ ಮನುಕುಲ ಸಹಿತ ಸಕಲ ಜೀವಸಂಕುಲದ ರಕ್ಷಣೆಗೆ ಅತ್ಯಗತ್ಯ ಎಂದು ಸಂದೇಶ ಸಾರಿದ ಈ ಅಭಿಯಾನಕ್ಕೆ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ, ಉಪ್ಪಿನಂಗಡಿ ಜೇಸಿಐ ಘಟಕ, 34ನೇ ನೆಕ್ಕಿಲಾಡಿ ಜೇಸಿಐ ಘಟಕ, ರೋಟರಿ ಕ್ಲಬ್, ಗ್ರಾ.ಪಂ., ವನಿತಾ ಸಮಾಜ, ಸ್ಥಳೀಯ ವಿದ್ಯಾ ಸಂಸ್ಥೆಗಳು ಸಹಯೋಗ ನೀಡಿದವು.
ಉಪ್ಪಿನಂಗಡಿ ಜೇಸಿ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಅಧ್ಯಕ್ಷ ದಿವಾಕರ ಆಚಾರ್ಯ, 34ನೇ ನೆಕ್ಕಿಲಾಡಿ ಜೇಸಿಐ ಅಧ್ಯಕ್ಷ ವಿನೀತ್ ಶಗ್ರಿತ್ತಾಯ, ಗಣ್ಯರಾದ ಡಾ| ರಾಜಾರಾಮ್ ಕೆ.ಬಿ., ಡಾ| ನಿರಂಜನ್ ರೈ, ಕಂಗ್ವೆ ವಿಶ್ವನಾಥ ಶೆಟ್ಟಿ, ಮೊಯ್ದಿನ್ ಕುಟ್ಟಿ, ರವೀಂದ್ರ ದರ್ಬೆ, ಹರಿಶ್ಚಂದ್ರ, ಯೂನಿಕ್ ಅಬ್ದುಲ್ ರಹಿಮಾನ್, ವಿಜಯ ಕುಮಾರ್ ಕಲ್ಲಳಿಕೆ, ಉಮೇಶ್ ಆಚಾರ್ಯ, ಬೆಳ್ಳಿಪ್ಪಾಡಿ ಪ್ರಕಾಶ್ ರೈ, ದಿನೇಶ್, ಕೇಶವ ಗೌಡ ರಂಗಾಜೆ, ಜನಾರ್ದನ್, ಶಿವ ಕುಮಾರ್ ಬಾರಿತ್ತಾಯ, ಪ್ರೀತೇಶ್, ದೇವಕಿ, ವೀಣಾ ,ಉಷಾ ಮುಳಿಯ ಭಾಗವಹಿದ್ದರು.