Advertisement
ಪ್ರವಾಸೋಧ್ಯಮ ಇಲಾಖೆ ಅಡಿ ಆಧುನಿಕ ಬಹುಮಹಡಿ ಕಟ್ಟಡಗಳು, ವಸತಿ ಗೃಹಗಳು ನಿರ್ಮಾಣಗೊಂಡ ಬಳಿಕ ಈ ಕಟ್ಟಡವನ್ನು ಕೇಳುವವರು ಇಲ್ಲದಂತಾಗಿದೆ. ವಿವಿಧ ಇಲಾಖಾಧಿಕಾರಿಗಳು ಸಹಿತ ಇಲ್ಲಿ ವ್ಯಾಸ್ತವ್ಯ ಪಡೆದ ನಿರ್ದೇಶನಗಳು ಇವೆ. ಆದರೆ ಈ ಕಟ್ಟಡ ಒಳಹೊಕ್ಕರೆ ಛಾವಣಿ, ಪೀಠೊಪಕರಣ ಮುರಿದು ಮೂಲೆಗುಂಪು ಆಗಿದ್ದು, ಗೋಡೆ ಮುರಿದು ಬೀಳುವ ಹಂತದಲ್ಲಿದೆ. ಇಂತಹ ಸರಕಾರಿ ಸೊತ್ತು ಕಾಲಕಾಲದ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ಸರಕಾರಿ ಸವಲತ್ತನ್ನು ಉಳಿಸಿಕೊಳ್ಳಲು ಜನಪ್ರತಿನಿಧಿಗಳು, ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರವಾಸಿ ಮಂದಿರ ಕಟ್ಟಡ ಬೀಳುವ ಸ್ಥಿತಿಯಲ್ಲಿದಿದ್ದು, ತಾ.ಪಂ.ನ ಅರಿವಿಗೆ ಬಂದ ಬೆನ್ನಲ್ಲೇ 60 ಸಾವಿರ ಅನುದಾನ ರಿಪೇರಿ ಇಟ್ಟಿದ್ದು ತಾತ್ಕಲಿಕವಾಗಿ ತಾ.ಪಂ. ಸದಸ್ಯರ ನಿಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಸುಜಾತಕೃಷ್ಣ
ತಾ. ಪಂ. ಸದಸ್ಯೆ ಅನುದಾನ ಪ್ರಯತ್ನ
ಈ ಕಟ್ಟಡ ತಾ.ಪಂ ಅಧೀನದಲ್ಲಿದ್ದು ಕಳೆದ ತಾ.ಪಂ. ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿ ಸದಸ್ಯರಾದ ಸುಜಾತಕೃಷ್ಣ ಈ ಬಗ್ಗೆ ಪ್ರಸ್ತಾಪಿಸಿದ್ದು, ಅಧಿಕಾರಿಗಳಲ್ಲಿ ಈಗಾಗಲೇ ಸದ್ರಿ ಪ್ರವಾಸಿಮಂದಿರ ಕಡತವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗುವುದು. ಬಳಿಕ ನೂತನ ಕಟ್ಟಡ ನಿರ್ಮಿಸ ಲು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು.
– ಸಂಜೀವ ಮಠಂದೂರು,
ಪುತ್ತೂರು ಶಾಸಕರು