Advertisement

ಉಪ್ಪಿನಂಗಡಿ: ಜ್ಯೋತಿರ್ಲಿಂಗ ರಥ ಯಾತ್ರೆಗೆ ಚಾಲನೆ

02:26 PM Feb 25, 2017 | |

ಉಪ್ಪಿನಂಗಡಿ: ಶಿವರಾತ್ರಿ ಹಾಗೂ ಉಪವಾಸ ಜಾಗರಣೆಯ ಮಹತ್ವವನ್ನು ಜನತೆಗೆ ಸಾರಿ ಹೇಳುವ ಸಲುವಾಗಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಲಾದ ಜ್ಯೋತಿರ್ಲಿಂಗ ರಥ ಯಾತ್ರೆಯು ಶಿವರಾತ್ರಿಯ ಶುಭ ದಿನವಾದ ಶುಕ್ರವಾರದಂದು ಉಪ್ಪಿನಂಗಡಿಯಲ್ಲಿ ಚಾಲನೆ ಪಡೆಯಿತು.

Advertisement

ಶಿವಲಿಂಗಕ್ಕೆ ಹೂ ಹಾರ ಹಾಕಿ ಧ್ವಜವನ್ನಿತ್ತು ಚಾಲನೆ ನೀಡಿದ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ ಮಾತನಾಡಿ, ಶಿವ ತಣ್ತೀದ ಅರಿವಿನೊಂದಿಗೆ ಬದುಕಿನಲ್ಲಿ ಅಪರಿಮಿತ ಆನಂದವನ್ನು ಕಂಡುಕೊಳ್ಳಲು ಸಾಧ್ಯ. ಇದನ್ನು ಋಷಿ ಮುನಿಗಳು ಸಾದರ ಪಡಿಸಿದ್ದಾರೆ. ಅಂತಹ ಆಧ್ಯಾತ್ಮದ ದಿವ್ಯಾನುಭವವನ್ನು ನಾಡಿನೆಲ್ಲೆಡೆ ಪ್ರಸಹರಿಸಲು ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಕಾರ್ಯಕರ್ತರು ಮುಂದಾಗಿರುವುದು ಸಂತಸದಾಯಕ ನಡೆ ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಯು. ಎಲ್‌. ಉದಯ ಕುಮಾರ್‌, ನಡ³ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶಿವಣ್ಣ ಗೌಡ, ರತ್ನಾ ಜೀ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ಕೃಷ್ಣ ರಾವ್‌ ಅರ್ತಿಲ, ಸುಂದರ ಗೌಡ ಸಚಿನ್‌, ಕೈಲಾರ್‌ ರಾಜ್‌ ಗೋಪಾಲ ಭಟ್‌, ಕೆ. ಜಗದೀಶ್‌ ಶೆಟ್ಟಿ ಸಹಿತ  ಹಲವಾರು ಪ್ರಮುಖರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next