Advertisement

ಉಪ್ಪಿನಂಗಡಿ ಜಾತ್ರೆ: ಅವಭೃಥ ಸ್ನಾನ, ರಂಗಪೂಜೆ

03:33 PM Mar 17, 2017 | |

ಉಪ್ಪಿನಂಗಡಿ : ಇತಿಹಾಸ ಪ್ರಸಿದ್ಧ  ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ನಡೆದ ದೇವರ ಪೇಟೆ ಸವಾರಿ, ಕಟ್ಟೆ ಪೂಜೆ, ಅವಭೃಥ ಸ್ನಾನ, ರಂಗಪೂಜೆ ಹಾಗೂ ಧ್ವಜಾವರೋಹಣ ಬುಧವಾರ ರಾತ್ರಿ ಭಕ್ತಿ, ಸಡಗರದೊಂದಿಗೆ ನಡೆಯಿತು.

Advertisement

ದೇವಸ್ಥಾನದಲ್ಲಿ  ದೇವರ ಬಲಿ ಹೊರಟು ಉಪ್ಪಿನಂಗಡಿಯ ರಥ ಬೀದಿಯಾಗಿ ಹೊಸ ಬಸ್‌ ನಿಲ್ದಾಣದ ಅಬಳಿಯ ಅಶ್ವತ್ಥ ಕಟ್ಟೆಯಲ್ಲಿ ಕಟ್ಟೆ ಪೂಜೆ ನೆರವೇರಿಸಲಾಯಿತು. ಬಳಿಕ ಹಳೇ ಬಸ್‌ ನಿಲ್ದಾಣದ ಬಳಿಯ ಅಶ್ವತ್ಥ ಕಟ್ಟೆಯಲ್ಲಿ ಕಟ್ಟೆಪೂಜೆ ನರವೇರಿಸಲಾಗಿ ಉಪ್ಪಿನಂಗಡಿಯ ನೇತ್ರಾವತಿ ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ದೇವರ ಅವಭೃಥ ಸ್ನಾನವು ಭಕ್ತಗಡಣದೊಂದಿಗೆ ನಡೆಯಿತು. ಬಳಿಕ ಉದ್ಭವ ಲಿಂಗದಲ್ಲಿ  ದೇವರಿಗೆ ರಂಗಪೂಜೆ ನೆರವೇರಿಸಿ, ದೇವಸ್ಥಾನದ ಧ್ವಜಾವರೋಹಣವನ್ನು ಮಾಡಲಾಯಿತು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಲಿಮಾರ ರಘುನಾಥ ರೈ, ಸದಸ್ಯರಾದ ಕೆ. ರಾಧಾಕೃಷ್ಣ ನಾೖಕ್‌, ಡಾ| ಕೆ.ಬಿ. ರಾಜಾರಾಮ್‌,  ಸವಿತಾ ಕೆ., ಅನಿತಾ ಕೆ., ಸೋಮನಾಥ, ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ಜಿ. ಕೃಷ್ಣ ರಾವ್‌, ಹರೀಶ್‌ ಉಪಾಧ್ಯಾಯ, ಗಣ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ, ವಿಜಯ ಕುಮಾರ್‌ ಕಲ್ಲಳಿಕೆ, ರಮೇಶ್‌ ಭಂಡಾರಿ, ಉಷಾ ಚಂದ್ರ ಮುಳಿಯ, ಚಿದಾನಂದ ನಾಯಕ್‌,  ಎನ್‌. ಗೋಪಾಲ ಹೆಗ್ಡೆ, ಕಾಮಾಕ್ಷಿ ಜಿ ಹೆಗ್ಡೆ, ಐ. ಸುಧಾಕರ ನಾಯಕ್‌, ಅಶೋಕ್‌ ಕುಮಾರ್‌ ರೈ ನೆಕ್ಕರೆ, ದೇಗುಲದ ವ್ಯವಸ್ಥಾಪಕ ವೆಂಕಟೇಶ್‌ ಭಟ್‌ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಉಪ್ಪಿನಂಗಡಿ ಹಳೆ ಬಸ್‌ ನಿಲ್ದಾಣದಲ್ಲಿ ಗೆಳೆಯರು 94 ಇದರ ಸಾರಥ್ಯದಲ್ಲಿ ಭಕ್ತಿ- ಭಾವ ರಸಮಂಜರಿ,  ಅನ್ನಬ್ರಹ್ಮ ಯೋಜನೆಗೆ ಧನ ಸಹಾಯ ವಿತರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next