Advertisement

ಉಪ್ಪಿನಂಗಡಿ: ಹಿಜಾಬ್‌ ಧರಿಸಿ ತರಗತಿ ಪ್ರವೇಶಕ್ಕೆ ಸತತ ಯತ್ನ

02:27 AM Jun 08, 2022 | Team Udayavani |

ಉಪ್ಪಿನಂಗಡಿ: ನಿಯಮ ಉಲ್ಲಂಘಿಸಿ ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶಿಸುತ್ತಿದ್ದ ಕೆಲವ ರನ್ನು ಅಮಾನತು ಮಾಡಿದ್ದಲ್ಲದೆ, ಇತರರ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರೂ ಅಮಾ ನತಾಗಿರುವವರ ಪೈಕಿ ಹಲವರು ಮಂಗಳವಾರ ಮತ್ತೆ ತರಗತಿಗೆ ಪ್ರವೇಶಿಸಲು ಯತ್ನಿಸಿದ ಘಟನೆ ಉಪ್ಪಿನಂಗಡಿಯ ಸರಕಾರಿ ಕಾಲೇಜಿನಲ್ಲಿ ಮಂಗಳವಾರ ನಡೆದಿದೆ.

Advertisement

ಅವಕಾಶ ಸಿಗದ ಕಾರಣ ವಿಶ್ರಾಂತಿ ಕೊಠಡಿಯಲ್ಲೇ ದಿನ ಕಳೆದಿದ್ದಾರೆ. ಉಚ್ಚ ನ್ಯಾಯಾಲಯ ತೀರ್ಪು, ಸರಕಾರದ ಆದೇಶ, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ಣಯದ ಹೊರತಾಗಿಯೂ ಸತತವಾಗಿ ನಿಯಮ ಉಲ್ಲಂಘಿಸಿ ಹಿಜಾಬ್‌ ಧರಿಸಿಯೇ ಕಾಲೇಜು ಪ್ರವೇಶಿಸಲುದ್ದೇಶಿಸಿದ್ದ 24 ವಿದ್ಯಾರ್ಥಿನಿಯರನ್ನು ಸೋಮವಾರದಿಂದ ಒಂದು ವಾರದ ಕಾಲ ಅಮಾನತುಗೊಳಿಸಲಾ ಗಿತ್ತು. ಇದಕ್ಕೂ ಮುನ್ನ ಇದೇ ಕಾರಣಕ್ಕಾಗಿ 7 ಮಂದಿ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿತ್ತು.

ಸೋಮವಾರ ಅಮಾನತುಗೊಳಿಸಲ್ಪಟ್ಟ ವಿದ್ಯಾರ್ಥಿ ನಿ ಯರ ಪೈಕಿ ಹಲವರು ತಮಗೆ ಅಮಾನತು ಆದೇಶದ ಬಗ್ಗೆ ತಿಳಿದಿರಲಿಲ್ಲ ಎಂಬ ವಾದ ಮಂಡಿಸಿ ಮಂಗಳವಾರ ಕಾಲೇಜಿಗೆ ಬಂದರಾದರೂ ಅವರಿಗೆ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಲಾಯಿತು.

ಮಂಗಳವಾರವೂ 7 ಮಂದಿ ವಿದ್ಯಾರ್ಥಿನಿಯರು ಸಮವಸ್ತ್ರ ನಿಯಮ ಪಾಲನೆಯೊಂದಿಗೆ ತರಗತಿಗೆ ಹಾಜರಾಗಿದ್ದರು.

ಮಂಗಳೂರು ವಿವಿ ಕಾಲೇ ಜು: ಮೂವರಿಗೆ ನೋಟಿಸ್‌
ಮಂಗಳೂರು: ಹಿಜಾಬ್‌ ಧರಿಸಲು ಅವಕಾಶ ನೀಡದಿರುವ ಕಾಲೇಜಿನ ನಿಯಮವನ್ನು ವಿರೋಧಿಸಿ ಪತ್ರಿಕಾಗೋಷ್ಠಿ ನಡೆಸಿದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೋಟಿಸ್‌ ನೀಡಿದ್ದಾರೆ.

Advertisement

ಕಾಲೇಜಿನ ಶಿಸ್ತು, ನಿಯಮ ಮೀರಿ ಕಾಲೇಜಿಗೆ ಪತ್ರಿಕಾಗೋಷ್ಠಿ ನಡೆಸಿರುವ ಬಗ್ಗೆ, ಕಾಲೇಜಿಗೆ ಸಂಬಂಧ ಪಡದವರೊಂದಿಗೆ ಕಾಲೇಜಿನ ನಿಯಮವನ್ನು ಟೀಕಿಸಿರುವ ಬಗ್ಗೆ 3 ದಿನಗಳ ಒಳಗೆ ವಿವರಣೆ ನೀಡುವಂತೆ ನೋಟಿಸಿನಲ್ಲಿ ತಿಳಿಸಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next