Advertisement
ಈಗಾಗಲೇ ಇರುವ ಹಳೇ ಕಟ್ಟಡ ಅವಧಿ ಪೂರ್ಣಗೊಂಡಿದ್ದು, ಹೊಸದಾಗಿ ನಿರ್ಮಿಸಲಾಗುವ ನಾಲ್ಕು ಮಹಡಿಗಳ ಕಟ್ಟಡದಲ್ಲಿ 30 ಅಂಗಡಿ ಕೊಠಡಿಗಳು, ಪ್ರವಾಸಿಗರಿಗೆ ವಸತಿ ಗೃಹ, ಸಭಾಂಗಣ, ಮೊದಲಾದ ಮೂಲ ಆವಶ್ಯಕತೆಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವನ್ನು ಪಂಚಾಯತ್ ಆಡಳಿತ ತನ್ನ ಸ್ವಂತ ಸಂಪನ್ಮೂಲಗಳಿಂದಲೇ ಹೊಂದಿಸಿ ಕೊಳ್ಳುವ ಭರವಸೆ ವ್ಯಕ್ತಪಡಿಸಿದೆ.
ಉಪ್ಪಿನಂಗಡಿ ಪಟ್ಟಣವು ಪುಣ್ಯ ತೀರ್ಥ ಕ್ಷೇತ್ರವಾಗಿದೆ. ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಕಾಣುತ್ತಿದೆ. ಇಲ್ಲಿಗೆ ಬರುವ ಯಾತ್ರಾರ್ಥಿಕರಿಗೆ ಉತ್ತಮ ಸೌಲಭ್ಯ ದೊರೆಯುವಂತಾಗಲು ದೂರಗಾಮಿ ಚಿಂತನೆ ಬೇಕು. ಇದಕ್ಕೆ ಬಹು ಉಪಯೋಗಿ ಕಟ್ಟಡ ನಿರ್ಮಿಸಲು ಪಂಚಾಯತ್ ಮುಂದಾಗಿದೆ. ಪಂಚಾಯತ್‌ನ ಎಲ್ಲ ಸದಸ್ಯರು ಪಕ್ಷ ಬೇಧ ಮರೆತು ಬೆಂಬಲ ಸೂಚಿಸುತ್ತಿದ್ದಾರೆ. ಇದು ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂಬುದು ಗ್ರಾಮಸ್ಥರು ಅಭಿಪ್ರಾಯವಾಗಿದೆ.