Advertisement

ಉಪ್ಪಿನಕುದ್ರು ಶಿಲ್ಪಾ ಆತ್ಮಹತ್ಯೆ ಪ್ರಕರಣ : ಆರೋಪಿ ಅಜೀಝ್ ಬಂಧನ

09:01 PM May 30, 2022 | Team Udayavani |

ಕುಂದಾಪುರ : ತಾಲೂಕಿನ ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಉಪ್ಪಿನಕುದ್ರು ಶಿಲ್ಪಾ ದೇವಾಡಿಗ (25) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ದಂಪತಿ ಪೈಕಿ ಕೋಟೇಶ್ವರದ ಮೂಡುಗೋಪಾಡಿ ನಿವಾಸಿ ಅಜೀಝ್ (32) ನನ್ನು ಕುಂದಾಪುರ ಪೊಲೀಸರು ಸೋಮವಾರ ಹೆಮ್ಮಾಡಿಯಲ್ಲಿ ಬಂಧಿಸಿದ್ದಾರೆ.

Advertisement

ಆರೋಪಿಯನ್ನು ಕುಂದಾಪುರದ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂ. 6ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಶಿಲ್ಪಾ ತಲ್ಲೂರಿನ ಜವುಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು ಟ್ಯುಟೋರಿಯಲ್‌ ಹೋಗುವ ಸಮಯದಲ್ಲೇ ಅಜೀಝ್ ಜತೆ ಸ್ನೇಹ, ಸಲುಗೆ ಉಂಟಾಗಿತ್ತು. ಪ್ರೇಮದ ನಾಟಕವಾಡಿದ್ದ ಅಜೀಝ್ ಆಕೆಯ ಜತೆ ವೈಯಕ್ತಿಕ ಸಮಯ ಕಳೆದು ವೀಡಿಯೋ, ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಬಳಿಕ ಮತಾಂತರವಾಗಿ ಮದುವೆ ಮಾಡಿಕೊಳ್ಳುವಂತೆ ಶಿಲ್ಪಾಗೆ ಒತ್ತಾಯ ಮಾಡಿದ್ದ ಎನ್ನಲಾಗಿದ್ದು, ಕಳೆದ ವಾರ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅನಂತರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಜೀಝ್ ಹಾಗೂ ಆತನ ಪತ್ನಿ ಸಲ್ಮಾ ವಿರುದ್ಧ ಮೃತರ ಸಹೋದರ ನೀಡಿದ ದೂರಿನಂತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಅಜೀಝ್ ಬಂಧನಕ್ಕೆ ದೇವಾಡಿಗರ ಸಂಘದವರು, ಹಿಂದೂ ಸಂಘಟನೆಗಳು, ಬೈಂದೂರು ಶಾಸಕರು ಒತ್ತಡ ಹೇರಿದ್ದರು.

ಇದನ್ನೂ ಓದಿ : ಪುತ್ತೂರು : 20 ವರ್ಷದ ಹಿಂದೆ ಗೂಡಂಗಡಿಯಲ್ಲಿ ದಿನಸಿ ಕಳವು ಪ್ರಕರಣ : ಐಟಿ ಉದ್ಯೋಗಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next