Advertisement

ಮೇಲ್ಮನೆ ಟಿಕೆಟ್‌: ಮುಂದುವರಿದ ಗೃಹ ಸಚಿವರ ಅಸಮಾಧಾನ

12:40 AM May 30, 2024 | Team Udayavani |

ಬೆಂಗಳೂರು: ಮೇಲ್ಮನೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರಲ್ಲಿ ಅಸಮಾಧಾನ ಮುಂದುವರಿದಿದ್ದು, ಟಿಕೆಟ್‌ ಹಂಚಿಕೆಯಲ್ಲಿ ನಮ್ಮ ಸಲಹೆಯನ್ನು ಕೇಳಿಲ್ಲ. ಎಷ್ಟು ಅರ್ಜಿಗಳು ಬಂದಿವೆ ಅಂತನೂ ಗೊತ್ತಿಲ್ಲ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ತಿಳಿಸಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಪಕ್ಷಕ್ಕಾಗಿ ದುಡಿದಿ¨ªಾರೋ, ಯಾವ ಸಮುದಾಯ ಪಕ್ಷದ ಜತೆ ನಿಂತಿದೆಯೋ ಅಂತಹವರಿಗೆ ಅವಕಾಶ ಕಲ್ಪಿಸಬೇಕು. ಪಕ್ಷಕ್ಕಾಗಿ ಕೆಲಸ ಮಾಡಿದ ಅನೇಕರಿಗೆ ಅನುಭವ ಇರುತ್ತದೆ. ಅಂತಹವರೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಪಡೆಯಬೇಕಿತ್ತು ಎಂದು ಹೇಳಿದರು.

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ನಮ್ಮ ಸಲಹೆಯನ್ನಂತೂ ಕೇಳಿಲ್ಲ. ಎಷ್ಟು ಅರ್ಜಿಗಳು ಬಂದಿವೆ ಅಂತನೂ ಗೊತ್ತಿಲ್ಲ. ಏಳು ಸ್ಥಾನಗಳು ನಮ್ಮ ಪಕ್ಷಕ್ಕೆ ಬರುತ್ತವೆ. 300 ಅರ್ಜಿ ಬಂದಿವೆ ಎಂಬುದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಆಯ್ಕೆ ಮಾಡುವುದು ಕಷ್ಟದ ಕೆಲಸ. ಉನ್ನತ ಮಟ್ಟದ ಸಮಿತಿ, ಅದರ ಜತೆ ಚರ್ಚಿಸಿದರೆ ಸಲಹೆಗಳು ಬರುತ್ತವೆ. ಆದರೆ, ಈಗ ಕಮಿಟಿ ರಚಿಸುವ ಸಮಯ ಮೀರಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜತೆಗೆ ನನ್ನ ಹೇಳಿಕೆಯನ್ನು ಯಾರೂ ತಪ್ಪಾಗಿ ಅಥೆìçಸಿಕೊಳ್ಳಬೇಕಾದ ಅಗತ್ಯ ಇಲ್ಲ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next