Advertisement
ಗುರುವಾರ ಬೆಳಗ್ಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು, ಮೂರು ವಿಶ್ವ ವಿದ್ಯಾಲಯಗಳ ಮಸೂದೆಗಳು, ಕರ್ನಾಟಕ ಋಣ ಪರಿಹಾರ ಮಸೂದೆ, ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ, ಶಿಕ್ಷಕರ ವರ್ಗಾವಣೆ ಕಾಯ್ದೆ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಮಸೂದೆಗಳ ಮಂಡನೆಗೆ ಅನುಮತಿ ನೀಡಿದರು.
ಈ ಬಾರಿಯ ಅಧಿವೇಶನದದಲ್ಲಿ ಏಳು ದಿನಗಳ ಕಾಲ 10 ತಾಸು 20 ನಿಮಿಷ ಕಲಾಪ ನಡೆದು 11 ಮಸೂದೆಗಳು ಅಂಗೀಕಾರವಾಗಿವೆ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ತಿಳಿಸಿದರು. ಈ ಅವಧಿಯಲ್ಲಿ 671 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ 90 ಪ್ರಶ್ನೆಗಳನ್ನು ಅಂಗೀಕರಿಸಿ, 16 ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಅಧಿವೇಶನದಲ್ಲಿ ಒಂದು ಹಕ್ಕುಚ್ಯುತಿ ಸೂಚನೆಯನ್ನು ಮಂಡಿಸಿ, ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಯಿತು. ಶೂನ್ಯವೇಳೆಯ ಒಟ್ಟು 6 ಪ್ರಸ್ತಾವಗಳ ಪೈಕಿ ಎರಡಕ್ಕೆ ಉತ್ತರ ಮಂಡಿಸಲಾಯಿತು ಎಂದು ಹೇಳಿದರು.