Advertisement

ಎಸ್ಟಿಗೆ ಉಪ್ಪಾರ ಸಮಾಜ ಸೇರಿಸಲು ಆಗ್ರಹ

04:29 PM Jan 05, 2018 | |

ಯಾದಗಿರಿ: ಹಿಂದುಳಿದ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ಗುರುವಾರ ಜಿಲ್ಲಾ ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಉಪ್ಪಾರ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಗಾಗಿ ಕೂಡಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಉಪ್ಪಾರ ಸಮಾಜ ಬಾಂಧವರು ಗಾರೇ ಕೆಲಸ, ಗೋಡೆಗಳನ್ನು ಕಟ್ಟುವ ಕೆಲಸ, ಕೂಲಿ ಮಾಡುವುದು, ಕಲ್ಲು ಒಡೆಯುವುದು. ಹೀಗೆ ಸಣ್ಣಪುಟ್ಟ ಕಸುಬುಗಳನ್ನು ಮಾಡುತ್ತಿದ್ದಾರೆ. ಉದ್ಯೋಗದಲ್ಲಿ ವಡ್ಡರ ಹಾಗೂ ಉಪ್ಪಾರ ಸಮಾಜದ ಕುಸುಬುಗಳು ಒಂದೇ ಆಗಿವೆ. ಆದರೆ ವಡ್ಡರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ
ಉಪ್ಪಾರ ಸಮಾಜವನ್ನು ಮೀಸಲಾತಿ ಪಟ್ಟಿಗೆ ಸೇರಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.

ಉಪ್ಪಾರ ಸಮಾಜದ ಮುಖಂಡರು ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಈ ಸಮಾಜದ ಸ್ಥಿತಿಗತಿ ಅರಿಯಲು ರಚನೆಯಾದ ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ, ಹಾವನೂರು ಆಯೋಗದ ವರದಿಗಳು ಉಪ್ಪಾರ ಸಮಾಜವು ಹಿಂದುಳಿದ ಸಮಾಜವೆಂದು ಸ್ಪಷ್ಟ ವರದಿ ನೀಡಿದ್ದರೂ ಇಲ್ಲಿಯವರೆಗೆ ಆಡಳಿತ ನಡೆಸಿದ ಯಾವುದೇ ಸರಕಾರವು ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ರಾಜಕೀಯ ಪಕ್ಷಗಳು ಉಪ್ಪಾರ ಸಮಾಜವನ್ನು ಚುನಾವಣೆಯಲ್ಲಿ ಮಾತ್ರ ಬಳಸಿಕೊಳ್ಳುತ್ತಿವೆ ಎಂದು ದೂರಿದ
ಪ್ರತಿಭಟನಕಾರರು, ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾರಿಗೆ ಸೇರ್ಪಡೆಗೊಳಿಸಿದಾಗ ಮಾತ್ರ ಸರ್ವತೋ ಮುಖ ಅಭಿವೃದ್ಧಿ ಸಾಧ್ಯ ಆಗುತ್ತದೆ ಎಂದರು.

Advertisement

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಅಮರೇಶ ಸಾಹು ಕಟ್ಟಿಮನಿ, ಜಿಲ್ಲಾಧ್ಯಕ್ಷ ರಾಘವೇಂದ್ರ ಸಾಹುಕಾರ ಖಾನಾಪುರ, ಲಕ್ಷ್ಮಣ ಉಪ್ಪಾರ, ಲಕ್ಷ್ಮಣ ಸಾಹುಕಾರ ಹೊರಮನಿ, ಸತೀಶ ಮೂರಗೊಂಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next