Advertisement
ಭಟ್ಟರ ಜೀವನಾಡಿ ಭಟ್ಟಾಕಲಂಕ/ ಅಕಲಂಕ ಪ್ರತಿ ಪಾದಿತ ಭಾಷಾ ವ್ಯಾಕರಣ ಶಾಸ್ತ್ರವೆಂದರೆ ತಪ್ಪಾಗದು. ಇವರ ಪಿಎಚ್.ಡಿ. ಸಂಶೋಧನ ಪ್ರಬಂಧವೂ ಇದಕ್ಕೆ ಸಂಬಂಧಿಸಿದ್ದು. ಭಟ್ಟಾಕಲಂಕ ಜೈನ ಕವಿ. ಈತನ ಗುರು ಅಕಲಂಕದೇವ. ಇವರು ಒಬ್ಬರಿರಬಹುದೆ ಎಂಬ ಜಿಜ್ಞಾಸೆಯನ್ನೂ ಭಟ್ಟರು ಮಾಡಿದ್ದರು. ಕವಿ ಎಂದು ಆಡುಮಾತಿನಲ್ಲಿ ಬಂದಿದೆಯಾದರೂ ಇವರು ಶಬ್ದಮಣಿ ದರ್ಪಣ, ಕವಿರಾಜಮಾರ್ಗ, ಕಾವ್ಯಾವಲೋಕನದಂತಹ ಲಾಕ್ಷಣಿಕ/ ವ್ಯಾಕರಣ ಗ್ರಂಥ “ಶಬ್ದಾನುಶಾಸನ’ವನ್ನು ಬರೆದ ಕಾರಣ ಈತನೊಬ್ಬ ಲಾಕ್ಷಣಿಕ/ ವೈಯಾಕರಣ.
Related Articles
Advertisement
ಕನ್ನಡ, ಹವ್ಯಕ, ತುಳು ಭಾಷೆಗಳ ಅಧ್ಯಯನ ಗಳ ಆಕರ ಗ್ರಂಥವಾದ “ಮಾನಸ’ವು “ಶಿವ ಮೆರೆದ ಹಳ್ಳಿ ಶಿವಳ್ಳಿ’, “ಮಧ್ವವಿಜಯದಲ್ಲಿ ತುಳು ಶಬ್ದಗಳು’, “ಹವ್ಯಕ ರಲ್ಲಿ ಅಡ್ಡ ಹೆಸರು’, “ಹವ್ಯಕರಲ್ಲಿ ತುಳು ಶಬ್ದಗಳು’, “ಹವ್ಯಕ-ಒಳಭೇದಗಳು’, “ಕನ್ನಡದ ಕೆಲವು ಪ್ರಾದೇಶಿಕ ವೈಶಿಷ್ಟéಗಳು’, “ಹೊಸ ಗನ್ನಡದಲ್ಲಿ ಇತ್ತೀಚಿನ ಕೆಲವು ಪ್ರಯೋಗಗಳು’ ಹೀಗೆ ಹಲವು ಲೇಖನಗಳ ಮೂಲಕ ಭಾಷೆ-ಸಂಸ್ಕೃತಿಗಳ ಉತVನನ ಕಂಡುಬರುತ್ತವೆ.
ಕಾಸರಗೋಡಿನ ಬಹುಮುಖೀ ಭಾಷೆ, ಸಾಹಿತ್ಯ, ಶಾಸನ, ಭೌಗೋಳಿಕ ಕುತೂಹಲ, ಸ್ಮಾರಕಗಳು, ದೇವಸ್ಥಾನಗಳು, ಹಳೆಯ ನಾಣ್ಯ ಕಡತ, ಸಾಂಸ್ಕೃತಿಕ- ಸಾಹಿತ್ಯಿಕ- ಸಾಮಾಜಿಕ- ರಾಜಕೀಯ ಮಹತ್ವವೆಲ್ಲ ವನ್ನೂ “ಗಡಿನಾಡು- ಕಾಸರಗೋಡು’ ಕೃತಿಯಲ್ಲಿ ಕೆತ್ತಿರುವುದು ಬಹುಮುಖೀ ಸಂಶೋಧನ ಪ್ರವೃತ್ತಿ ಯನ್ನು ಸಾರುವುದಲ್ಲದೆ ಮಾತೃಭೂಮಿಗೂ (ಕಾಸರ ಗೋಡು ಜಿಲ್ಲೆಯ ಉಪ್ಪಂಗಳ) ನ್ಯಾಯ ಒದಗಿಸಿ ದಂತಾಗಿದೆ. ಜೀವನ, ಸಂಸ್ಕೃತಿ, ಸೃಷ್ಟಿ, ಇತಿಹಾಸ, ದೇವರು, ನಂಬಿಕೆ ಇತ್ಯಾದಿಗಳ ಬಗೆಗೆ ಕೀರ್ತನೆ, ಕಗ್ಗದ ಸಾಲಿಗೆ ಸೇರುವ ನಾಲ್ಕು ಪಾದಗಳ (ಚೌಪದಿ) ಮುಕ್ತಕಗಳನ್ನೂ (ಬಾಳನೋಟ) ಬರೆದು ಫಿಲಾಸಫರ್ ಆದರು. ಗಮಕ ಇವರ ಇನ್ನೊಂದು ಕಾರ್ಯವ್ಯಾಪ್ತಿ.
30ಕ್ಕೂ ಹೆಚ್ಚು ಪ್ರಕಟಿತ ಕೃತಿಗಳನ್ನು ಭಟ್ಟರು ಹೊರ ತಂದಿದ್ದರೆ, “ಅಶ್ವತ್ಥ’, “ಅಷ್ಟಮ’ ಇತ್ಯಾದಿ ಆರು ಸಂಪಾ ದಿತ ಕೃತಿಗಳಿವೆ. ಸೀತಾಪರಿತ್ಯಾಗ, ಬೇರಿಲ್ಲದ ಬಳ್ಳಿ, ಕಾರ್ಗಿಲ್ ವೀರ (ಕಿರು ನಾಟಕ), ಮಧ್ವಾಚಾರ್ಯರ ಜೀವನಯಾತ್ರೆಯನ್ನು ಒಳಗೊಂಡ “ಆನಂದಾಯನ’ ದಂತಹ ಅಪ್ರಕಟಿತ ಕೃತಿಗಳೂ ಇವೆ. ಪ್ರವಾಸಪ್ರಿಯರೂ ಆಗಿದ್ದ ಡಾ| ಭಟ್ಟರು ಪ್ರವಾಸದ ವೇಳೆ ಕಂಡುಬಂದ ಅನೇಕ ಕುತೂಹಲಗಳನ್ನು ಲೇಖನಕ್ಕೆ ಇಳಿಸಿ “ಉದಯವಾಣಿ’ಗೆ ಕೊಡುತ್ತಿದ್ದರು. ಒಟ್ಟಾರೆ ಭಟ್ಟರಲ್ಲಿ ಶ್ರದ್ಧಾಧ್ಯಯನ ಸ್ವಯಂವ್ಯಕ್ತ. ವ್ಯಾಕರಣ, ಮುಕ್ತ ಕಗಳಂತಹ ವಿದ್ವತ್ಪರಂಪರೆಗೆ ಈಗ ಆದರ ಕಡಿಮೆ. ಶೈಕ್ಷಣಿಕವಾಗಿ ಎಷ್ಟು ಬೇಕೋ ಅಷ್ಟನ್ನು ಬರೆದರೆ ಸಾಕೆ ನ್ನುವ ಕಾಲಘಟ್ಟದಲ್ಲಿ ಉಪ್ಪಂಗಳರು ಹವ್ಯಾಸ ರೀತಿ ಮಾಡಿದ ಸಾಧನೆ ಉತ್ತುಂಗದಂತೆ ಕಾಣುತ್ತದೆ.
–ಮಟಪಾಡಿ ಕುಮಾರಸ್ವಾಮಿ