Advertisement

ವಿವಾದಕ್ಕೆ ಕಾರಣವಾದ ನಟಿ ನಿಧಿ ಸುಬ್ಬಯ್ಯ ಫೋಟೋ ಅಪ್‌ಲೋಡ್‌ 

06:00 AM Aug 05, 2018 | |

ಮೈಸೂರು: ನಟಿ ನಿಧಿಸುಬ್ಬಯ್ಯ ಇತ್ತೀಚೆಗೆ ಮೈಸೂರು ಅರಮನೆಗೆ ಭೇಟಿ ನೀಡಿ ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ತೆಗೆದುಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.

Advertisement

2016ರಲ್ಲಿ ಯುವ ಜೋಡಿಯೊಂದು ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಪ್ರಿವೆಡ್ಡಿಂಗ್‌ ಫೋಟೋ ಶೂಟ್‌ ನಡೆಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆ ಘಟನೆ ನಂತರ ಅರಮನೆಯ ವೀಕ್ಷಕರಿಗೆ ಹಲವು ನಿರ್ಬಂಧಗಳನ್ನು ಹೇರಿ,ದರ್ಬಾರ್‌ ಹಾಲ್‌ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಜತೆಗೆ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರು ಹೊರ ಆವರಣದಲ್ಲಿ ಫೋಟೋ-ಸೆಲ್ಫಿ ತೆಗೆದುಕೊಳ್ಳಲೂ ಪೊಲೀಸರು ಅಡ್ಡಿಪಡಿಸುತ್ತಾರೆ. ಆದರೂ ನಟಿ ನಿಧಿಸುಬ್ಬಯ್ಯ ಅವರಿಗೆ ನಿಷೇಧಿತ ಪ್ರದೇಶವಾದ ದರ್ಬಾರ್‌ ಹಾಲ್‌ನಲ್ಲಿ ಫೋಟೋ ತೆಗೆದುಕೊಳ್ಳಲು ಹೇಗೆ ಅವಕಾಶ ನೀಡಲಾಯಿತೆಂಬ ಪ್ರಶ್ನೆ ಕೇಳಿಬಂದಿದೆ.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ, ಮೈಸೂರು ಅರಮನೆ ಮಂಡಳಿ ಅಧ್ಯಕ್ಷರಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ 2003ರ ಜೂನ್‌ 19ರಂದು ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪ್ರವಾಸಿಗರು ಅರಮನೆ ಮಂಡಳಿಗೆ 20 ರೂ. ಶುಲ್ಕ ಪಾವತಿಸಿ ಅರಮನೆಯ ಒಳಭಾಗದಲ್ಲಿ ಫ್ಲಾಶ್‌ ಲೈಟ್‌ ಬಳಸದೆ ಛಾಯಾಚಿತ್ರ ತೆಗೆಯಲು ಅನುಮತಿ ನೀಡಲಾಗಿದೆ. 2018ರ ಮಾರ್ಚ್‌ 1ರಂದು ನಡೆದ ಅರಮನೆ ಮಂಡಳಿ ಸಭೆಯಲ್ಲಿ ಮೊಬೈಲ್‌ ಕ್ಯಾಮೆರಾ ಹಾಗೂ ಡಿಜಿಟಲ್‌ ಕ್ಯಾಮೆರಾಗಳಲ್ಲಿ ಫ್ಲಾಶ್‌ಲೈಟ್‌ ಬಳಸದೆ ಉಚಿತವಾಗಿ ಫೋಟೋ ತೆಗೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next