Advertisement

ಪರೀಕ್ಷಾ ಮಾಹಿತಿ ಆನ್‌ಲೈನ್‌ನಲ್ಲೇ ಅಪ್‌ಲೋಡ್‌

10:52 PM Feb 29, 2020 | Team Udayavani |

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮಾಹಿತಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸು ವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಪಿಯು ಇಲಾಖೆ ವೆಬ್‌ಸೈಟ್‌ನಲ್ಲಿ ಈಗಾಗಲೇ ಲಿಂಕ್‌ ಬಿಡಲಾಗಿದೆ.

Advertisement

ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಕೇಂದ್ರದ ಪ್ರಾಂಶುಪಾಲರು ಅಥವಾ ಮುಖ್ಯ ಅಧೀಕ್ಷಕರಿಗೆ ಇಲಾಖೆಯಿಂದ ಕಳುಹಿಸಲಾಗು ತ್ತದೆ. ಲಾಗಿನ್‌ ಆದ ನಂತರ ಮೊಬೈಲ್‌ ಸಂಖ್ಯೆ ಪರಿಶೀಲಿಸಿ, ಹೊಸ ಪಾಸ್‌ವರ್ಡ್‌ ಮಾಡಿಕೊಳ್ಳ ಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು, ಉತ್ತರ ಪತ್ರಿಕಾ ಪಾಲಕರು, ಪರೀಕ್ಷಾ ಕಚೇರಿ ಅಧೀಕ್ಷಕರು, ಬ್ಲಾಕ್‌ ಅಧೀಕ್ಷಕರು ಮತ್ತು ವಿಶೇಷ ಜಾಗೃತ ದಳದ ಅಧೀಕ್ಷಕರ ವಿವರನ್ನು ಚೀಫ್ ಮಾಸ್ಟರ್‌ ಆಯ್ಕೆ ಮೂಲಕ ನಮೂದಿಸಿ ಸಲ್ಲಿಸಬೇಕು.

ಪರೀಕ್ಷೆ ದಿನ ಹಂಚಿಕೆ ಮಾಡಿರುವ ಉತ್ತರ ಪತ್ರಿಕೆಗಳ ಸಂಖ್ಯೆ, ಗೈರಾದ ವಿದ್ಯಾರ್ಥಿಗಳು ಮತ್ತು ವಾಪಸ್‌ ಪಡೆದ ಉತ್ತರ ಪತ್ರಿಕೆ, ಹೆಚ್ಚುವರಿ ಬಳಸಿದ ಉತ್ತರ ಪತ್ರಿಕೆ ಸಂಖ್ಯೆ ಮತ್ತು ಪರೀಕ್ಷೆ ಇತರೆ ವಿವರವನ್ನು ಕಡ್ಡಾಯವಾಗಿ ಆಯಾ ದಿನದಂದೇ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ಪ್ರತಿ ದಿನದ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿ, ಗೈರು, ಪರೀಕ್ಷಾ ಅಕ್ರಮ ಮಾಹಿತಿಯನ್ನು ಅದೇ ದಿನ ಅಪ್‌ಲೋಡ್‌ ಮಾಡಬೇಕು. ಎಲ್ಲ ಮಾಹಿತಿಯನ್ನು ಅದೇ ದಿನ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡ ಬೇಕು. ಇಲ್ಲದಿದ್ದರೆ ಕೇಂದ್ರದ ಮುಖ್ಯ ಅಧೀಕ್ಷಕರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next