Advertisement

ಕನ್ನಡದಲ್ಲೇ ಯುಪಿಐ ವಹಿವಾಟು ನಡೆಸಿ; ಫೀಚರ್‌ ಫೋನ್‌ ಬಳಕೆದಾರರಿಗೆ ಸಿಹಿಸುದ್ದಿ

09:34 AM Sep 11, 2022 | Team Udayavani |

ನವದೆಹಲಿ:ಇನ್ನು ಮುಂದೆ ಫೀಚರ್‌ ಫೋನ್‌ ಬಳಕೆದಾರರು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಯುಪಿಐ ಪಾವತಿ ಮಾಡಬಹುದು. ಟೋನ್‌ ಟ್ಯಾಗ್‌ನ ವಾಯ್ಸಸೆ ಯುಪಿಐ ಪೇಮೆಂಟ್ಸ್‌ಗೆ ಆರ್‌ಬಿಐ ಅನುಮತಿ ನೀಡಿದ್ದು, ಇದರ ಮೂಲಕ ಗ್ರಾಮೀಣ ಪ್ರದೇಶಗಳ ಜನರೂ ತಮ್ಮದೇ ಭಾಷೆಯಲ್ಲಿ ಡಿಜಿಟಲ್‌ ವಹಿವಾಟು ಮಾಡಲು ಅನುವು ಮಾಡಿಕೊಡಲಾಗಿದೆ.

Advertisement

ಗ್ರಾಹಕರಿಗೆ ಯುಪಿಐ 123 ಪಾವತಿ ಸೇವೆಯನ್ನು ಒದಗಿಸಲು ಸೌಂಡ್‌ ವೇವ್‌ ಟೆಕ್‌ ಸೊಲ್ಯೂಷನ್ಸ್‌ ಸಂಸ್ಥೆ ಟೋನ್‌ಟ್ಯಾಗ್‌ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. “ವಾಯ್ಸ ಸೇ ಯುಪಿಐ ಡಿಜಿಟಲ್‌ ಪಾವತಿ’ ಮೂಲಕ ಫೀಚರ್‌ ಫೋನ್‌ ಬಳಕೆದಾರರು ಕೇವಲ ಧ್ವನಿಯ ಮೂಲಕ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಡಿಜಿಟಲ್‌ ವಹಿವಾಟು ನಡೆಸಬಹುದು.

ಎನ್‌ಎಸ್‌ಡಿಎಲ್‌ ಪೇಮೆಂಟ್‌ ಬ್ಯಾಂಕ್‌ ಮತ್ತು ಎನ್‌ಪಿಸಿಐ ಪಾಲುದಾರಿಕೆಯೊಂದಿಗೆ, ವಾಯ್ಸಸೇ ದೇಶಾದ್ಯಂತ 40 ಕೋಟಿ ಫೀಚರ್‌ ಫೋನ್‌ ಬಳಕೆದಾರರಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪಾವತಿ ಸೇವೆ ಒದಗಿಸಲಿದೆ.

ಬಳಕೆ ಮಾಡುವ ಕ್ರಮ ಹೇಗೆ?
ಮೊದಲಿಗೆ ನೀವು “6366 200 200′ ಎಂಬ ಐವಿಆರ್‌ ಸಂಖ್ಯೆಗೆ ಕರೆ ಮಾಡಬೇಕು. ಅಲ್ಲಿ ಭಾಷೆಯ ಆಯ್ಕೆ ಕೊಟ್ಟಾಗ “ಕನ್ನಡ’ ಎಂದು ಹೇಳಿದರೆ ಸಾಕು. ಈ ಸೇವೆಯ ಮೂಲಕ ನೀವು ಕೇವಲ ಧ್ವನಿಯಲ್ಲೇ ನೀರು, ವಿದ್ಯುತ್‌ ಸೇರಿದಂತೆ ಯುಟಿಲಿಟಿ ಬಿಲ್‌ ಪಾವತಿ ಮಾಡಬಹುದು, ನಿಮ್ಮ ಖಾತೆಯಲ್ಲಿ ಹಣ ಎಷ್ಟಿದೆ ಎಂದು ನೋಡಬಹುದು, ಫಾಸ್ಟಾಗ್‌ ಆ್ಯಕ್ಟಿವೇಷನ್‌ ಅಥವಾ ರೀಚಾರ್ಜ್‌ ಮಾಡಬಹುದು. ಆದರೆ, ಹಣ ವರ್ಗಾವಣೆಗೆ ಅವಕಾಶವಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next