Advertisement

ಯುಪಿಐಗೆ 1 ಬಿಲಿಯನ್‌ ಬಳಕೆದಾರರು

09:41 AM Oct 29, 2019 | Team Udayavani |

ಮಣಿಪಾಲ: 3 ವರ್ಷಗಳ ಹಿಂದೆ ಕಾರ್ಯಗತಗೊಂಡ ಭಾರತೀಯ ಮೂಲದ ಆನ್‌ಲೈನ್‌ ಪಾವತಿ ವ್ಯವಸ್ಥೆ “ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌’ ಯುಪಿಐ ಈಗ 1 ಬಿಲಿಯನ್‌ ಬಳಕೆದಾರರನ್ನು ಸಂಪಾದಿಸಿದೆ.

Advertisement

ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಜಾರಿಗೆ ಬಂದ ಈ ವ್ಯವಸ್ಥೆ ಇಂದು 100 ಕೋಟಿ ಬಳಕೆದಾರರನ್ನು ಹೊಂದಿದೆ. ಈ ನೂರು ಕೋಟಿ ಗ್ರಾಹಕರು ಇಂದು ತಮ್ಮ ಹಣಕಾಸು ವ್ಯವಹಾರಗಳನ್ನು ಆನ್‌ಲೈನ್‌ ಮೂಲಕವೇ ಹೆಚ್ಚಾಗಿ ನಡೆಸುತ್ತಿದ್ದಾರೆ. ಇಂದು ಈ ವ್ಯವಸ್ಥೆ ಸಿಂಗಾಪುರ ಮತ್ತು ಯುಎಇನಲ್ಲಿ ಲಭ್ಯವಿದ್ದು, ಅಲ್ಲಿನ ಗ್ರಾಹಕರು ಇದನ್ನು ಬಳಸಬಹುದಾಗಿದೆ.

ನೋಟು ಅಮಾನೀಕರಣಗೊಳ್ಳುವ ಮೊದಲೇ 2016ರಲ್ಲಿ ಈ ವ್ಯವಸ್ಥೆಯನ್ನು ರಾಷ್ಟ್ರದಲ್ಲಿ ಪರಿಚಯಿಸಲಾಗಿತ್ತು. ಒಂದು ಖಾತೆಯಿಂದ ಮತ್ತೂಂದು ಬ್ಯಾಂಕ್‌ ಖಾತೆಗೆ ನಗದನ್ನು ಸುಲಭವಾಗಿ ಕಳುಹಿಸಿಕೊಡಲಾಗುತ್ತಿತ್ತು. ನಮ್ಮ ಬ್ಯಾಂಕ್‌ ಡಿಟೇಲ್‌ಗ‌ಳನ್ನು ಹೆಚ್ಚಾಗಿ ಅವಲಂಭಿಸದೇ ಕೇವಲ ಮೊಬೈಲ್‌ ಸಂಖ್ಯೆ, ಈ ಮೇಲ್‌ ಮತ್ತು ಕ್ಯೂ ಆರ್‌ ಕೋಡ್‌ಗಳ ಮೂಲಕ ಪಾವತಿಯನ್ನು ನಡೆಸಲಾಗುತ್ತದೆ. ಬ್ಯಾಂಕುಗಳ ಮೂಲಕ ಹೋಗಿ ನಾವು ಹಣ ವರ್ಗಾಯಿಸುವುದಕ್ಕಿಂತ ಸುಲಭವಾಗಿ ಈ ವ್ಯವಸ್ಥೆಯಲ್ಲಿ ನಾವು ಪೂರೈಸಬಹುದಾಗಿದೆ.

ಕಳೆದ ಅಗಸ್ಟ್‌ ತಿಂಗಳಲ್ಲಿ 142 ಕೋಟಿ ವ್ಯವಹಾರಗಳು ದಾಖಲಾಗಿವೆ. ಇದರಲ್ಲಿ ಕ್ರೆಡಿಟ್‌ ಮತ್ತು ಡೆಬಿಟ್‌ಗಳು ಸೇರಿವೆ. ಅಂಗಡಿಗಳು ಸೇರಿದಂತೆ ಶಾಪಿಂಗ್‌ ಮಾಲ್‌ಗ‌ಳಲಿ ಕ್ಯೂಆರ್‌ ಕೋಡ್‌ಗಳ ಮೂಲಕ ಪಾವತಿಗಳು ನಡೆಯುತ್ತಿದೆ. ಸದ್ಯ 1 ಕೋಟಿ ಇಂತಹ ವ್ಯವಸ್ಥೆಗಳು ಇದ್ದು ಮುಂದಿನ 2 ವರ್ಷಗಳಲ್ಲಿ ಅದನ್ನು 3 ಕೋಟಿಗೆ ವಿಸ್ತರಿಸುವ ಪ್ರಸ್ತಾವನೆ ಇದ್ದು, ವಿವಿಧ ದೇಶಗಳಿಗೂ ಯುಪಿಐ ಅನ್ನು ವಿಸ್ತರಿಸುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next