Advertisement

UI: ʼಕರಿಮಣಿ ಮಾಲೀಕʼ ಟು ʼಬೆಳ್ಳುಳ್ಳಿ ಕಬಾಬ್‌ʼ: ಉಪ್ಪಿ ʼಯುಐʼ ಯಿಂದ ಬಂತು ʼಟ್ರೋಲ್‌ʼ ಹಾಡು

03:57 PM Mar 04, 2024 | Team Udayavani |

ಬೆಂಗಳೂರು:  ರಿಯಲ್‌ ಸ್ಟಾರ್‌ ಉಪ್ಪಿ ಅವರ ʼಯುಐʼ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದೆ.

Advertisement

ಈಗಾಗಲೇ ತನ್ನ ಟೈಟಲ್‌ ನಿಂದಲೇ ಸಖತ್‌ ಸದ್ದು ಮಾಡಿರುವ ʼಯುಐʼ ಸಿನಿಮಾ ತನ್ನ ವಿಭಿನ್ನ ಪ್ರಚಾರದಿಂದ ಸದ್ದು ಮಾಡಿದೆ. ಇತ್ತೀಚೆಗೆ ʼಚಿಕ್ಕದು – ದೊಡ್ಡದುʼ ಎನ್ನುವ ಹಾಡಿನ ಪ್ರೋಮೊ ಬಿಟ್ಟು ತಲೆಗೆ ಹುಳು ಬಿಟ್ಟಿದ್ದ ಉಪ್ಪಿ ಇದೀಗ ʼಟ್ರೋಲ್‌ʼ ಹಾಡನ್ನು ರಿಲೀಸ್‌ ಮಾಡಿದ್ದಾರೆ.

ವಿಶೇಷವಾವಗಿ ಈ ಹಾಡಿನಲ್ಲಿ ಉಪೇಂದ್ರ ಈ ಹಾಡಿನಲ್ಲಿ ಸೋಶಿಯಲ್‌ ಮೀಡಿಯಾದ ಎಲ್ಲಾ ಟ್ರೋಲ್‌ ಡೈಲಾಗ್ಸ್‌ ಗಳನ್ನೇ ಹಾಡಾಗಿ ಬಳಸಿದ್ದಾರೆ. ʼಟ್ರೋಲ್‌ ಆಗುತ್ತೆ ಇದು, ಟ್ರೋಲ್‌ ಆಗುತ್ತೆ, ಇನ್ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ. ಕೆಲಸ ಇಲ್ಲದವರಿಗೆ ಟೈಮ್‌ ಪಾಸ್‌ ಆಗುತ್ತೆʼ ಎಂದು ಹಾಡಿನ ಸಾಹಿತ್ಯವನ್ನು ನರೇಶ್‌ ಕುಮಾರ್‌ ಹೆಚ್‌ ಎನ್‌ ಬರೆದಿದ್ದಾರೆ.

ʼಕರಿಮಣಿ ಮಾಲೀಕʼ,ʼಬೆಳ್ಳುಳ್ಳಿ ಕಬಾಬ್‌ʼ, ʼನಾನು ನಂದಿನಿʼ, ಆಲ್‌ ರೈಟ್‌ ಮುಂದಾಕ್ಕೆ ಹೋಗೋಣ..ʼ ʼಲಾರಿ ಡ್ರೈವರ್‌ʼ,  ಇಡೀ ರಾಜ್ಯಕ್ಕೆ ಖುಷಿ ಕೊಡೋ ಸುದ್ದಿಯಿದೆ.. ಹೀಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ ಎಲ್ಲಾ ಮಿಮ್ಸ್‌ ಗಳ ಪದವನ್ನು ಹಾಡಿನಲ್ಲಿ ಬಳಸಿದ್ದಾರೆ.

ನಾಯಕಿ ರೀಷ್ಮಾ ರೆಟ್ರೋ ಮ್ಯೂಸಿಕ್‌ ನಂತೆ ಇರುವ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.  ಅಜನೀಶ್‌ ಲೋಕನಾತ್‌ ಸಂಗೀತ ನೀಡಿದ್ದಾರೆ.

Advertisement

ಉಪೇಂದ್ರ ನಿರ್ದೇಶನದ ‌ʼಯುಐʼ ಸಿನಿಮಾಕ್ಕೆ ಕೆ.ಪಿ ಶ್ರೀಕಾಂತ್, ಜಿ.ಮನೋಹರನ್‌ ಬಂಡವಾಳ ಹಾಕಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next