Advertisement

ಉಪ್ಪಿ ಫ್ಯಾನ್ಸ್‌ಗೆ ಡಬಲ್‌ ಧಮಾಕಾ; UI ಟೀಸರ್ ಇಂದು ರಿಲೀಸ್

10:17 AM Sep 18, 2023 | Team Udayavani |

ನಟ ಉಪೇಂದ್ರ ಅಭಿಮಾನಿಗಳಿಗೆ ಇಂದು ಡಬಲ್‌ ಧಮಕಾ. ಒಂದು ಕಡೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವಾದರೆ ಮತ್ತೂಂದು ಕಡೆ ಬಹುನಿರೀಕ್ಷಿತ “ಯು-ಐ’ ಸಿನಿಮಾದ ಟೀಸರ್‌ ರಿಲೀಸ್‌.. ಈ ಎರಡೂ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ನಡೆಯಲಿದೆ.

Advertisement

ಈ ಕುರಿತು ನಟ ಉಪೇಂದ್ರ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳನ್ನು ಮನವಿ ಮಾಡಿದ್ದಾರೆ. “ಅಭಿಮಾನಿಗಳಿಗೆ ನಾನು ಸೆ.18ರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಿಗುತ್ತೇನೆ. ಆ ದಿನ ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ದಿನದ ಆಚರಣೆ ಹಾಗೂ ಯು-ಐ ಸಿನಿಮಾದ ಟೀಸರ್‌ ರಿಲೀಸ್‌ ಮಾಡಿ ಸಂಭ್ರಮಿಸೋಣ’ ಎಂದಿದ್ದಾರೆ.

ಇನ್ನು, ದೊಡ್ಡ ಗ್ಯಾಪ್‌ನ ನಂತರ ಉಪೇಂದ್ರ ಅವರು “ಯು-ಐ’ ಮೂಲಕ ನಿರ್ದೇಶನಕ್ಕೆ ಇಳಿದಿರುವುದರಿಂದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. “ಯು-ಐ’ ಅಲ್ಲದೇ ಉಪೇಂದ್ರ ಅವರ “45′ ಚಿತ್ರ ಚಿತ್ರೀಕರಣದಲ್ಲಿದ್ದು, “ಬುದ್ಧಿವಂತ-2′ ಬಿಡುಗಡೆ ಹಂತಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next