Advertisement
ಮಣಿಪಾಲ ಸಂಸ್ಥೆ ಈಗ ಜಾಗತಿಕವಾಗಿ ಗುರುತಿಸಿಕೊಂಡಿದೆ. ನಾನೂ ಮಂಗಳೂರು ಕೆಎಂಸಿಯ ಪ್ರಾಕ್ತನ ವಿದ್ಯಾರ್ಥಿ. ಆಗ ಕಾಲೇಜು ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷನೂ ಆಗಿದ್ದೆ. ಉಪೇಂದ್ರ ಪೈಯವರಂತಹ ಹಿರಿಯರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅತೀವ ಸಂತಸ ವಾಗುತ್ತಿದೆ ಎಂದರು. ಇದೇ ದಿನ ಉಪೇಂದ್ರ ಪೈಯವರ ಪುತ್ರ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈಯವರ ಜನ್ಮದಿನವೂ ಆಗಿರುವುದರಿಂದ ಸಚಿವರು ಸತೀಶ್ ಯು. ಪೈಯವರನ್ನು ಅಭಿನಂದಿಸಿದರು.
“ಉದಯವಾಣಿ’, “ತರಂಗ’ ಓದುತ್ತಾ ಬೆಳೆದಿರುವುದರ ಜತೆಗೆ ಇದರಿಂದ ಪ್ರಭಾವಿತನೂ ಆಗಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಸ್ತಂಭವಾಗಿ ಸಮಾಜಕ್ಕೆ ಧ್ವನಿ, ಶಕ್ತಿಯಾಗಿ, ಸಮಾಜವನ್ನು ಬೆಳೆಸುವ ಕೆಲಸ “ಉದಯವಾಣಿ’ ಮಾಡುತ್ತಿದೆ ಎಂದು ಸಚಿವ ಡಾ| ಅಶ್ವತ್ಥನಾರಾಯಣ ಶ್ಲಾಘಿಸಿದರು. ಮಣಿಪಾಲ ಎನರ್ಜಿ ಆ್ಯಂಡ್ ಇನಾ#†ಟೆಕ್‌ನ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಸಾಗರ್ ಮುಖೋಪಾಧ್ಯಾಯ ಉಪಸ್ಥಿತರಿದ್ದರು.