Advertisement

ಉಪ್ಪಿ 50ನೇ ಬರ್ತ್ ಡೇ ದಿನ “ಉತ್ತಮ ಪ್ರಜಾಕೀಯ ಪಕ್ಷ”ಲೋಕಾರ್ಪಣೆ

11:39 AM Sep 18, 2018 | Sharanya Alva |

ಬೆಂಗಳೂರು:ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಹುಟ್ಟುಹಬ್ಬದ ದಿನದಂದೇ ಉತ್ತಮ ಪ್ರಜಾಕೀಯ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಘೋಷಿಸಿದ ಆರು ತಿಂಗಳ ಬಳಿಕ ಇದೀಗ ಹೊಸ ಪಕ್ಷದೊಂದಿಗೆ 2ನೇ ಬಾರಿಗೆ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.

Advertisement

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ದಿಂದ ಉಪೇಂದ್ರ ಅವರನ್ನು ಉಚ್ಛಾಟಿಸಲಾಗಿತ್ತು. ಸ್ವತಃ ಉಪೇಂದ್ರ ಅವರೇ ಕಟ್ಟಿದ್ದ ಪಕ್ಷದಲ್ಲಿ ಹೆಸರಿನ ಗೊಂದಲ ಹಾಗೂ ಆಂತರಿಕ ಭಿನ್ನಾಭಿಪ್ರಾಯದಿಂದ ಕೆಪಿಜೆಪಿಯಿಂದ ಉಪೇಂದ್ರ ಅವರು ಹೊರಬಂದಿದ್ದರು.

ಇದೀಗ ತಮ್ಮ ಹೊಸ ಪಕ್ಷಕ್ಕೆ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಎಂದು ಹೆಸರಿಟ್ಟಿದ್ದು, ತಮ್ಮ ಹುಟ್ಟುಹಬ್ಬದ ದಿನವಾದ ಮಂಗಳವಾರದಂದು ಅಧಿಕೃತವಾಗಿ ಪಕ್ಷದ ಸ್ಥಾಪನೆ ಬಗ್ಗೆ ಘೋಷಿಸಣೆ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಪಕ್ಷ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next