Advertisement

Upendra: ಜೈಲಿನಿಂದ ಹೊರ ಬರುತ್ತಿದ್ದಂತೆ ಅಲ್ಲು ಅರ್ಜುನ್‌ ಭೇಟಿಯಾದ ಉಪೇಂದ್ರ

03:07 PM Dec 14, 2024 | Team Udayavani |

ಹೈದರಬಾದ್:‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಕಾಲ್ತುಳಿತ ಪ್ರಕರಣದಲ್ಲಿ ಬಂಧನವಾಗಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

Advertisement

ಅಭಿಮಾನಿಗಳು, ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಅಲ್ಲು ಅರ್ಜುನ್‌ ಅವರನ್ನು ಅವರ ನಿವಾಸದಲ್ಲಿ ಭೇಟಿ ಆಗಿದ್ದಾರೆ. ಈ ವೇಳೆ ಕನ್ನಡ ನಟ- ನಿರ್ದೇಶಕ ಉಪೇಂದ್ರ (Upendra) ಅವರು ಅಲ್ಲು ಅರ್ಜುನ್‌ ಅವರನ್ನು ಭೇಟಿ ಆಗಿದ್ದಾರೆ.

ಉಪೇಂದ್ರ ಅವರ ʼಯುಐʼ (UI Movie) ಸಿನಿಮಾ ಇದೇ ತಿಂಗಳಿನಲ್ಲಿ ರಿಲೀಸ್‌ ಆಗಲಿದೆ. ಸಿನಿಮಾ ತಂಡ ಈಗಾಗಲೇ ಪ್ರಮೋಷನ್ ನಲ್ಲಿ ನಿರತವಾಗಿದೆ. ಸದ್ಯ ಚಿತ್ರತಂಡ ಪ್ರಚಾರದ ಅಂಗವಾಗಿ ಆಂಧ್ರ ಪ್ರದೇಶದಲ್ಲಿದೆ.

ʼಯುಐʼ ಚಿತ್ರದ ತೆಲುಗು ವಿತರಣೆ ಹಕ್ಕನ್ನು ಅಲ್ಲು ಅರವಿಂದ್ ಮಾಲೀಕತ್ವದ ಮೈತ್ರಿ ಮೂವಿ ಮೇಕರ್ಸ್ ಖರೀದಿಸಿದೆ. ಹೀಗಾಗಿ ಟಾಲಿವುಡ್‌ನಲ್ಲಿ ಕನ್ನಡ ʼಯುಐʼಗೆ ಭರ್ಜರಿ ಬೆಂಬಲ ಸಿಗುವ ನಿರೀಕ್ಷೆಯಿದೆ.

Advertisement

ಅಲ್ಲು ಅರ್ಜುನ್‌ ಅವರನ್ನು ಭೇಟಿ ಆಗಿರುವ ಉಪ್ಪಿ ಅವರು ಒಂದಷ್ಟು ಕಾಲ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಯುಐ ಪ್ರಚಾರದಲ್ಲಿ ಅಲ್ಲು ಅರ್ಜುನ್ ಅವರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಉಪೇಂದ್ರ ಅವರು ಆಮಿರ್‌ ಖಾನ್‌ ಅವರನ್ನು ಭೇಟಿ ಆಗಿದ್ದರು. ಆಮಿರ್‌ ಖಾನ್‌ ಸಿನಿಮಾದ ಟ್ರೇಲರ್‌ ಮೆಚ್ಚಕೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಅಂದಹಾಗೆ ಉಪೇಂದ್ರ ಅವರು ಟಾಲಿವುಡ್‌ ಜನರಿಗೆ ಹೊಸ ಪರಿಚಯವೇನಲ್ಲ. ಈ ಹಿಂದೆ ಅಲ್ಲು ಅರ್ಜುನ್‌ ಅವರ ʼ ಸನ್ ಆಫ್ ಸತ್ಯಮೂರ್ತಿ ʼ ಚಿತ್ರದಲ್ಲಿ ಉಪ್ಪಿ ನಟಿಸಿದ್ದರು.

ಉಪೇಂದ್ರ ನಿರ್ದೇಶನದ ‌ʼಯುಐʼ ಸಿನಿಮಾಕ್ಕೆ ಕೆ.ಪಿ ಶ್ರೀಕಾಂತ್, ಜಿ.ಮನೋಹರನ್‌ ಬಂಡವಾಳ ಹಾಕಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ 20 ರಂದು ಸಿನಿಮಾ ರಿಲೀಸ್‌ ಆಗಲಿದೆ.

ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.