Advertisement

ಉಪ್ಪಿ ಜೊತೆ ಚಾಂದಿನಿ ಮತ್ತೆ ಡಿಂಗುಡಾಂಗು

04:01 PM Jun 04, 2017 | Team Udayavani |

“ಉಪೇಂದ್ರ ಮತ್ತೆ ಬಾ’ ಸಿನಿಮಾದ ಒಂದು ಹಾಡು ಹಾಗೂ ಕೆಲವು ದೃಶ್ಯಗಳಲ್ಲಿ ಚಾಂದಿನಿ ಗೆಸ್ಟ್‌ ಅಪಿಯರೆನ್ಸ್‌ ಮಾಡಲಿದ್ದಾರೆಂಬ ಸುದ್ದಿ ನಿಮಗೆ ಗೊತ್ತೇ ಇದೆ. ಈಗ ಆ ಹಾಡು ಹಾಗೂ ದೃಶ್ಯದ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋ ಹಾಗೂ ಮೈಸೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.

Advertisement

ಸಿನಿಮಾದೊಳಗಡೆ ಬರುವ ಡ್ರೀಮ್‌ ಸಾಂಗ್‌ ಇದಾಗಿದ್ದು, ಕನಸಲ್ಲಿ ಬಂದು ಕಾಡುವ ಸುಂದರಿಯಾಗಿ ಚಾಂದಿನಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ತುಂಬಾ ವರ್ಷಗಳ ನಂತರ ಉಪೇಂದ್ರ ಹಾಗೂ ಚಾಂದಿನಿ ಜೊತೆಯಾಗಿ ಕಾಣಿಸಿಕೊಂಡಂತಾಗಿದೆ. “ಎ’ ಚಿತ್ರದಲ್ಲಿ ಉಪೇಂದ್ರ ಹಾಗೂ ಚಾಂದಿನಿ ಜೊತೆಯಾಗಿ ನಟಿಸಿದ್ದರು. ಆ ಚಿತ್ರದ “ಚಾಂದಿನಿ ಚಲೀ ಗಯೀ ಚಾಂದಿನಿ’ ಹಾಡು ಕೂಡಾ ಸಖತ್‌ ಫೇಮಸ್‌ ಆಗಿತ್ತು. ಈ ಚಿತ್ರ ಚಾಂದಿನಿ ಕೆರಿಯರ್‌ಗೆ ಒಂದು ಬ್ರೇಕ್‌ ಕೊಟ್ಟಿದ್ದಂತೂ ಸುಳ್ಳಲ್ಲ. ಆದರೆ, “ಎ’ ನಂತರ ಉಪೇಂದ್ರ ಜೊತೆ ಚಾಂದಿನಿ ನಟಿಸಿರಲಿಲ್ಲ. ಈಗ “ಉಪೇಂದ್ರ ಹುಟ್ಟಿ ಬಾ’ ಸಿನಿಮಾ ಮೂಲಕ ಮತ್ತೆ ಉಪೇಂದ್ರ ಜೊತೆಯಾಗಿದ್ದಾರೆ. ಚಿತ್ರದ ಹಾಡು ಹಾಗೂ ಸಣ್ಣ ದೃಶ್ಯವೊಂದರಲ್ಲಿ ಚಾಂದಿನಿ ಕಾಣಿಸಿಕೊಂಡಿದ್ದು, ಉಪೇಂದ್ರ ಜೊತೆ ನಟಿಸಿದ ಖುಷಿ ಚಾಂದಿನಿಯವರಿಗಿದೆ.

ಅರುಣ್‌ ಲೋಕನಾಥ್‌ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಶ್ರುತಿ ಹರಿಹರನ್‌ ಹಾಗೂ ಪ್ರೇಮಾ ಕೂಡಾ ನಟಿಸಿದ್ದಾರೆ. ಉಪೇಂದ್ರ ಅವರ “ಉಪೇಂದ್ರ’ ಸಿನಿಮಾದಲ್ಲಿ ಪ್ರೇಮಾ ನಾಯಕಿಯಾಗಿ ನಟಿಸಿದ್ದರು. ಈಗ ಈ ಚಿತ್ರದ ಮೂಲಕ ಮತ್ತೂಮ್ಮೆ ಜೊತೆಯಾಗಿದ್ದಾರೆ.

ಚಿತ್ರದ ಹಾಡೊಂದರಲ್ಲಿ ಹರ್ಷಿಕಾ ಪೂಣತ್ಛ ಕೂಡಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್‌ ಅವರ ಸಂಗೀತ, ಜೆ.ಸ್ವಾಮಿ ಛಾಯಾಗ್ರಹಣ, ಜೋನಿ ಹರ್ಷ ಸಂಕಲನವಿದೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್‌, ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿಯವರ ಸಾಹಿತ್ಯವಿದೆ. ಸದ್ಯ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್‌ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next