Advertisement

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

10:04 AM May 15, 2024 | Team Udayavani |

ನವದೆಹಲಿ: ಆ್ಯಂಡ್ರಾಯ್ಡ್ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ತಾಂತ್ರಿಕ ಲೋಪಗಳು ಪತ್ತೆಯಾಗಿವೆ. ಹೀಗಾಗಿ, ದೇಶದ ಆ್ಯಂಡ್ರಾಯ್ಡ್ ಮೊಬೈಲ್‌ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಭಾರತೀಯ ಕಂಪ್ಯೂಟರ್‌ ತುರ್ತು ಸ್ಪಂದನಾ ತಂಡ (ಸಿಇಆರ್‌ಟಿ) ಎಚ್ಚರಿಕೆ ನೀಡಿದೆ.

Advertisement

ತಾಂತ್ರಿಕ ಲೋಪದ ಹಿನ್ನೆಲೆಯಲ್ಲಿ ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ನಿಯಂತ್ರಿಸಿ, ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಮೊಬೈಲ್‌ನಲ್ಲಿರುವ ಮೆಸೇಜ್‌, ಫೋಟೋ, ಸಂಪರ್ಕ ವಿವರಗಳು, ಹಣಕಾಸಿನ ದತ್ತಾಂಶಗಳನ್ನು ಕಲೆ ಹಾಕಬಹುದು. ಇಷ್ಟು ಮಾತ್ರವಲ್ಲದೆ ಮೊಬೈಲ್‌ ನಿಷ್ಕ್ರಿಯವಾಗುವಂತೆ ಹ್ಯಾಕರ್‌ಗಳು ಕೆಲಸ ಮಾಡಬಹುದು ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ, ಅಪರಿಚಿತ ಮೂಲಗಳಿಂದ ಬಂದ ಮಾಹಿತಿ ಕ್ಲಿಕ್‌ ಮಾಡದಂತೆ ಎಚ್ಚರಿಕೆ ನೀಡಿದೆ.

ಬಳಕೆದಾರರಿಗೆ ಅರಿವಿಲ್ಲದೆ, ಆ್ಯಪ್‌ ಅಳವಡಿಸುವಂತೆ ಮಾಡಿ ಮೊಬೈಲ್‌ನಲ್ಲಿ ಇರುವ  ಮಾಹಿತಿ ಪರಿಶೀಲಿಸಬಹುದು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್‌ ಮಾಡಬೇಕು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next