Advertisement

Chikkanna; ‘ಉಪಾಧ್ಯಕ್ಷ’ನಿಗೆ ಸ್ಟಾರ್ಸ್ ಸಾಥ್; ಜ.26ರಂದು ರಿಲೀಸ್

03:07 PM Jan 24, 2024 | Team Udayavani |

ಕಾಮಿಡಿ ಮೂಲಕ ಮೋಡಿ ಮಾಡಿರುವ ಚಿಕ್ಕಣ್ಣ ಈಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅವರು ನಾಯಕರಾಗಿ ನಟಿಸಿರುವ “ಉಪಾಧ್ಯಕ್ಷ’ ಚಿತ್ರ ಜ.26 ರಂದು ತೆರೆಕಾಣುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ ಲಿಸ್ಟ್‌ ಸೇರಿದೆ. ಅದೇ ಖುಷಿಯಲ್ಲಿರುವ ಚಿಕ್ಕಣ್ಣಗೆ ಮತ್ತೂಂದು ಖುಷಿಯ ಸುದ್ದಿ ನೀಡಿದ್ದಾರೆ ಸ್ಟಾರ್. ಅದು “ಉಪಾಧ್ಯಕ್ಷ’ ಸಿನಿಮಾವನ್ನು ನೋಡುವ ಕುರಿತಾಗಿ.

Advertisement

ಹೌದು, ಚಿಕ್ಕಣ್ಣ ಕಾಮಿಡಿ ನಟರಾಗಿ ಕನ್ನಡದ ಬಹುತೇಕ ಸ್ಟಾರ್‌ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಹೀರೋ ಆಗುತ್ತಿರುವ ಸಂದರ್ಭದಲ್ಲಿ ಚಿಕ್ಕಣ್ಣ ನಿಗೆ ಬೆಂಬಲ ನೀಡಲು ಒಂದಷ್ಟು ಸ್ಟಾರ್‌ಗಳು ಮುಂದೆ ಬಂದಿದ್ದಾರೆ. ಮುಖ್ಯವಾಗಿ ನಟರಾದ ದರ್ಶನ್‌, ಶಿವರಾಜ್‌ಕುಮಾರ್‌ ಹಾಗೂ ಧ್ರುವ ಸರ್ಜಾ ಸಾಥ್‌ ನೀಡುತ್ತಿದ್ದಾರೆ. ಈ ಮೂವರು “ಉಪಾಧ್ಯಕ್ಷ’ ಸಿನಿಮಾವನ್ನು ನೋಡುವುದಾಗಿ ಚಿಕ್ಕಣ್ಣನಿಗೆ ಹೇಳಿದ್ದು, ಇದು ಚಿಕ್ಕಣ್ಣ ಖುಷಿಗೆ ಕಾರಣವಾಗಿದೆ.

ಸದ್ಯಕ್ಕೆ ಕನ್ನಡದಿಂದ ದೂರ ಉಳಿದು ಪರಭಾಷೆಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಕೂಡಾ “ಉಪಾಧ್ಯಕ್ಷ’ ಸಿನಿಮಾಕ್ಕೆ ಶುಭಕೋರಿದ್ದಾರೆ. ಉಮಾಪತಿ ಫಿಲಂಸ್‌ ಲಾಂಛನದಲ್ಲಿ ಅನಿಲ್‌ ಕುಮಾರ್‌ ನಿರ್ದೇಶಿಸಿ, ಸ್ಮಿತಾ ಉಮಾಪತಿ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next