Advertisement

ವಿಜಯ ಬ್ಯಾಂಕ್‌ ವಿಲೀನ, ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಯುಪಿಎ ಸರಕಾರ ಕಾರಣ: ನಳಿನ್‌

02:36 PM Apr 02, 2019 | Team Udayavani |

ಸುಳ್ಯ: ಯುಪಿಎ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ, ಚಿದಂಬರಂ ಅವರು ವಿಜಯ ಬ್ಯಾಂಕ್‌ ವಿಲೀನಕ್ಕೆ ಮುನ್ನುಡಿ ಬರೆದವರು. ಹಣಕಾಸು ಸಮಿತಿ ಅಧ್ಯಕ್ಷರಾಗಿದ್ದ ವೀರಪ್ಪ ಮೊಲಿ ಅವರು ಇದಕ್ಕೆ ಒಪ್ಪಿಗೆ ನೀಡಿದವರು. ಆ ಅವಧಿಯಲ್ಲಿ ಜಿಲ್ಲೆಯ ಕಾಂಗ್ರೆಸಿಗರಿಗೆ ವಿಚಾರ ತಿಳಿದಿದ್ದರೂ ಯಾಕೆ ತಡೆದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಹಿಂದಿನ ಸರಕಾರ ಪಾಸ್‌ ಮಾಡಿದ ಬಿಲ್‌ ಅನ್ನು ಬಳಿಕದ ಸರಕಾರ ಬದಲಾಯಿಸಲಾಗದು. ಇದರಲ್ಲಿ ಎನ್‌ಡಿಎ ಸರಕಾರದ ಪಾತ್ರವಿಲ್ಲ ಎಂದರು.

Advertisement

ಹೆಸರು ಉಳಿಸಲು ಪ್ರಯತ್ನ
ಬ್ಯಾಂಕ್‌ ವಿಲೀನ ಪ್ರಕ್ರಿಯೆ ಅಂತಾ ರಾಷ್ಟ್ರೀಯ ಒಪ್ಪಂದವಾಗಿರುವ ಕಾರಣ ಬದಲಾಯಿಸುವುದು ಕಷ್ಟ. ಬರೋಡಾ, ದೇನಾ ಬ್ಯಾಂಕ್‌ ಹೆಸರಿನ ಜತೆಗೆ ವಿಜಯ ಬ್ಯಾಂಕ್‌ ಹೆಸರು ಕೂಡ ಇರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ. ಕೇಳಿದ್ದೇವೆ ಅದಕ್ಕೆ ಸಕರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ನಳಿನ್‌ ಹೇಳಿದರು.

ಸುಳ್ಳು ಸಂದೇಶ ವಿರುದ್ಧ ಕಾನೂನು ಹೋರಾಟ
ಹಿಂದುತ್ವದ ರಕ್ಷಣೆಗೆ ನಳಿನ್‌ಗಿಂತ ಮಿಥುನ್‌ ರೈ ಅವರ ಉತ್ತಮ ಎಂದು ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗುತ್ತಿರುವ ಬಗ್ಗೆ ಉತ್ತರಿಸಿದ ಸಂಜೀವ ಮಠಂದೂರು, ಸೋಲಿನ ಭೀತಿಯಿಂದ ಕಾಂಗ್ರೆಸ್‌ ಇಂತಹ ನಕಲಿ ಸಂದೇಶ ಸೃಷ್ಟಿ ಮಾಡಿದೆ. ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಕ್ಷ ಮುಂದಾಗಲಿದೆ ಎಂದರು.

ಸುಳ್ಳು ಸಂದೇಶ ಸೃಷ್ಟಿ ಡಾ| ಕಲ್ಲಡ್ಕ ದೂರು
ಬಂಟ್ವಾಳ: ತನ್ನ ಹೆಸರನ್ನು ಬಳಸಿಕೊಂಡು ಲೋಕಸಭಾ ಚುನಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳನ್ನು ಪ್ರಚುರಪಡಿಸುವ ಕೆಲಸ ನಡೆಯುತ್ತಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ನನ್ನ ಭಾವಚಿತ್ರ ಮತ್ತು ಹೆಸರು ಹಾಕಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗ್ಳಲ್ಲಿ ಕಾಂಗ್ರೆಸ್‌ ಪಕ್ಷದ ಲೋಕಸಭಾ ಅಭ್ಯರ್ಥಿ ಮಿಥುನ್‌ ರೈ ಪರವಾಗಿ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ವಿರುದ್ಧ ಇದ್ದೇನೆ ಎಂಬ ತಪ್ಪು ಸಂದೇಶಗಳು ರವಾನೆಯಾಗುತ್ತಿವೆ.  ತಪ್ಪು ಸಂದೇಶಗಳನ್ನು ಸೃಷ್ಟಿಸಿ ಜಾಲತಾಣದಲ್ಲಿ ರವಾನಿಸುತ್ತಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next