Advertisement

ಯುಪಿ ಯೋಧಾ ಸೂಪರ್‌ ಪ್ಲೇ ಆಫ್ಗೆ

01:17 PM Oct 16, 2017 | Team Udayavani |

ಪುಣೆ: ಪ್ರೊ ಕಬಡ್ಡಿ ಲೀಗ್‌ ಐದರ ಪುಣೆ ಚರಣದ ರವಿವಾರದ ರೋಚಕ ಪಂದ್ಯದಲ್ಲಿ ಯುಪಿ ಯೋಧಾ ತಂಡವು ಬೆಂಗಳೂರು ಬುಲ್ಸ್‌ ವಿರುದ್ಧ ಸೋತರೂ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವಲ್ಲಿ ಯಶಸ್ವಿಯಾಗಿದೆ.

Advertisement

ನಾಯಕ ರೋಹಿತ್‌ ಕುಮಾರ್‌ ಅವರ ಭರ್ಜರಿ ರೈಡ್‌ನಿಂದ ಬುಲ್ಸ್‌ ತಂಡವು 38-32 ಅಂಕಗಳಿಂದ ಯುಪಿ ತಂಡವನ್ನು ಕೆಡಹಿತು. ಆದರೆ ಏಳು ಅಂಕಗಳಿಗಿಂತ ಕಡಿಮೆ ಅಂತರದಲ್ಲಿ ಸೋತ ಕಾರಣ ಒಂದು ಅಂಕ ಪಡೆದ ಯುಪಿ ತಂಡ ತಾನಾಡಿದ 21  ಪಂದ್ಯಗಳಿಂದ ಒಟ್ಟು 60 ಅಂಕ ಗಳಿಸಿ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವುದನ್ನು ಖಚಿತಪಡಿಸಿದರು. ಬೆಂಗಳೂರು ಇನ್ನೂ ಎರಡು ಪಂದ್ಯ ಆಡಲಿದ್ದು ಸದ್ಯ 20 ಪಂದ್ಯಗಳಿಂದ 49 ಅಂಕ ಗಳಿಸಿದೆ. ಇನ್ನೆರಡು ಪಂದ್ಯಗಳಲ್ಲಿ ಗೆದ್ದರೂ ತಂಡದ ಮೊತ್ತ 59 ಆಗಲಿದ್ದು ನಾಲ್ಕನೇ ಸ್ಥಾನ ಪಡೆಯಬಹುದಾಗಿದೆ.  ಬೆಂಗಳೂರು ಇನ್ನೆರಡು ಪಂದ್ಯಗಳಲ್ಲಿ ಪಾಟ್ನಾ ಮತ್ತು ಯುಪಿ ತಂಡವನ್ನು ಎದುರಿಸಲಿದೆ. 

ರೈಡಿಂಗ್‌ನಲ್ಲಿ ಮಿಂಚಿದ ರೋಹಿತ್‌ 13 ಅಂಕ ಗಳಿಸಿದರೆ ಮಹೇಂದರ್‌ ಸಿಂಗ್‌ 10 ಅಂಕ ಪಡೆದರು. ಯುಪಿ ಪರ ಸುರೇಂದರ್‌ 10 ಅಂಕ ಮತ್ತು ರಿಷಾಂಕ್‌ ದೇವಾಡಿಗ 5 ಅಂಕ ಗಳಿಸಿದರು. 

ಪುನೇರಿ ಪಲ್ಟಾನ್ಸ್‌ ಜಯಭೇರಿ
ದಿನದ ಎರಡನೇ ಪಂದ್ಯದಲ್ಲಿ ತವರಿನ ಪುನೇರಿ ಪಲ್ಟಾನ್ಸ್‌ ತಂಡವು “ಎ’ ವಲಯದ ಕೊನೆಯ ಸ್ಥಾನಿ ದಬಾಂಗ್‌ ಡೆಲ್ಲಿ ತಂಡವನ್ನು 34-31 ಅಂಕಗಳಿಂದ ರೋಚಕವಾಗಿ ಸೋಲಿಸಿತು. ಈ ಗೆಲುವಿನಿಂದ ಪುನೇರಿ ತಾನಾಡಿದ 19 ಪಂದ್ಯಗಳಿಂದ 73 ಅಂಕ ಗಳಿಸಿದೆ. ದ್ವಿತೀಯ ಸ್ಥಾನದಲ್ಲಿರುವ ಹರಿಯಾಣ 74 ಅಂಕ ಹೊಂದಿದೆ. ಹಾಗಾಗಿ ಪುನೇರಿ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಹೊಂದಿದೆ. 

ನಾಯಕ ದೀಪಕ್‌ ಹೂಡ ಅವರ ಭರ್ಜರಿ ರೈಡ್‌ನಿಂದ ಪುನೇರಿ ಜಯ ಗಳಿಸುವಂತಾಯಿತು. ಅವರು 10 ಅಂಕ ಮತ್ತು ರಾಜೇಶ್‌ 7 ಅಂಕ ಗಳಿಸಿದರು. ಡೆಲ್ಲಿ ಪರ ಅಬೋಲ್‌ಫ‌ಜಲ್‌ 9 ಅಂಕ, ರೋಹಿತ್‌ 7 ಅಂಕ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next