Advertisement

ಮನಕಲುಕುವ ಘಟನೆ… ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಹೋಗಿ ಜೀವ ಕಳೆದುಕೊಂಡ ಮಹಿಳೆಯರು

07:12 PM Jul 08, 2023 | Team Udayavani |

ಉತ್ತರಪ್ರದೇಶ : ಬೈಕ್ ಅಪಘಾತದಲ್ಲಿ ರಸ್ತೆಗೆ ಬಿದ್ದಿದ್ದ ಇಬ್ಬರ ರಕ್ಷಣೆಗೆ ಹೋದ ಇಬ್ಬರು ಮಹಿಳೆಯರಿಗೆ ವೇಗವಾಗಿ ಬಂದ ಟ್ರಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಸಂಭವಿಸಿದೆ.

Advertisement

ಮೃತ ದುರ್ದೈವಿಗಳನ್ನು ಮಿಥಿಲೇಶ್ ದೇವಿ (45) ಮತ್ತು ನೇಮಾ ದೇವ್ (43) ಎಂದು ಗುರುತಿಸಲಾಗಿದೆ.

ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಪುರುಷ ಮತ್ತು ಮಹಿಳೆಗೆ ಟ್ರಕ್ ಡಿಕ್ಕಿ ಹೊಡೆದಿದ್ದು ಈ ವೇಳೆ ಗಾಯಗೊಂಡ ಇಬ್ಬರು ರಸ್ತೆಗೆ ಬಿದ್ದಿದ್ದಾರೆ ಇದನ್ನು ಕಂಡ ಅಲ್ಲಿಯೇ ಇದ್ದ ಇಬ್ಬರು ಮಹಿಳೆಯರು ಅವರ ರಕ್ಷಣೆಗೆ ಧಾವಿಸಿದ್ದಾರೆ ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್ ಈ ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆದು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಇಬ್ಬರು ಬೈಕ್ ಸವಾರರು ಹಾಗೂ ಓರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಸಿಎಂ ಶಿಂಧೆಗೆ ರಾಜೀನಾಮೆ ನೀಡುವಂತೆ ಹೇಳಲಾಗಿದೆ…: ಆದಿತ್ಯ ಠಾಕ್ರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next