ಉತ್ತರಪ್ರದೇಶ : ಪೊಲೀಸರು ರೈಲ್ವೆ ಹಳಿ ಮೇಲೆ ಎಸೆದ ತೂಕದ ಮಾಪನವನ್ನು ತರಲು ಹೋದ ತರಕಾರಿ ವ್ಯಾಪಾರಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ತರಕಾರಿ ವ್ಯಾಪಾರಿ ಕಾಲು ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದೆ.
ಕಾನ್ಪುರದ ಕಲ್ಯಾಣಪುರ ಪ್ರದೇಶದ ಸಾಹಿಬ್ ನಗರದ ನಿವಾಸಿ ಅರ್ಸಲಾನ್ (18) ಕಾಲು ಕಳೆದುಕೊಂಡ ವ್ಯಾಪಾರಿ.
ಕಾನ್ಪುರದ ರೈಲ್ವೆ ನಿಲ್ದಾಣದ ಬಳಿ ಹೆಚ್ಚಾಗಿ ತರಕಾರಿ ಮಾರಾಟಗಾರರು ಆಕ್ರಮಿಸಿಕೊಂಡಿರುವ ಅತಿಕ್ರಮಣವನ್ನು ಪೊಲೀಸರು ತೆರವುಗೊಳಿಸುತ್ತಿದ್ದ ವೇಳೆ ಅರ್ಸಲಾನ್ ನಡೆಸುತ್ತಿದ್ದ ಅಂಗಡಿ ಬಳಿ ಪೊಲೀಸರು ಬಂದು ಅಂಗಡಿ ತೆರವುಗೊಳಿಸಲು ಹೇಳಿದ್ದಾರೆ. ಅಲ್ಲದೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ವ್ಯಾಪಾರಿಯ ತೂಕದ ಮಾಪನವನ್ನು ಎತ್ತಿ ರೈಲ್ವೆ ಹಳಿ ಮೇಲೆ ಬಿಸಾಕಿದ್ದಾರೆ ಈ ವೇಳೆ ಅದನ್ನು ತರಲು ಹೋದ ವ್ಯಾಪಾರಿಗೆ ರೈಲು ಢಿಕ್ಕಿ ಹೊಡೆದು ವ್ಯಾಪಾರಿಯ ಕಾಲಿನ ಮೇಲೆ ರೈಲು ಹರಿದಿದೆ ಪರಿಣಾಮ ಯುವಕ ಕಾಲು ಕಳೆದುಕೊಂಡಿದ್ದಾನೆ.
ಸ್ಥಳೀಯರ ಹೇಳಿಕೆಯಂತೆ ಪೊಲೀಸರು ತರಕಾರಿ ವ್ಯಾಪಾರಿಗೆ ಥಳಿಸಿದ್ದಾರೆ ಅಲ್ಲದೆ ಆತನಲ್ಲಿದ್ದ ತೂಕದ ಮಾಪನವನ್ನು ರೈಲು ಹಳಿಯ ಮೇಲೆ ಬಿಸಾಕಿದ್ದಾರೆ ಇದನ್ನು ತರಲು ಹೋದ ವ್ಯಾಪಾರಿಗೆ ರೈಲು ಢಿಕ್ಕಿ ಹೊಡೆದಿದೆ, ಪೊಲೀಸರು ತಪ್ಪು ಎಸಗಿದ್ದಾರೆ ಇದರ ವಿಡಿಯೋ ಕೂಡ ಇಲ್ಲಿನ ರೈಲು ನಿಲ್ದಾಣದಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ.
ಘಟನೆ ಕುರಿತು ಮಾತನಾಡಿದ ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಧುಲ್ ಯುವಕನ ಮೇಲೆ ಹಲ್ಲೆ ನಡೆಸಿದ ಹೆಡ್ ಕಾನ್‌ಸ್ಟೆಬಲ್ ರಾಕೇಶ್ ನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಸಿಸಿ ಕ್ಯಾಮೆರಾ ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಶ್ವದ ಅತಿದೊಡ್ಡ ಉಕ್ಕು ಉತ್ಪಾದಿಸುವ ರಾಜ್ಯವಾಗಲಿದೆ: ಸಿಎಂ ಬೊಮ್ಮಾಯಿ