Advertisement
ಈ ಬೆಳವಣಿಗೆಯು ಬಿಜೆಪಿಗೆ ಆಘಾತ ನೀಡಿದ್ದರೆ ಎಸ್‌ಪಿಗೆ ಹೆಚ್ಚಿನ ಬಲ ತಂದುಕೊಟ್ಟಿದೆ. ರಾಜ್ಯದಲ್ಲಿ ಯಾದವೇತರ ಒಬಿಸಿಗಳ ಮತಗಳನ್ನು ಸೆಳೆಯಲು ಸಮಾಜವಾದಿ ಪಕ್ಷಕ್ಕೆ ಇದು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬುಧವಾರ ಮಾತನಾಡಿರುವ ಮೌರ್ಯ, “ಬಿಜೆಪಿಗೆ ವಾಪಸಾಗುವ ಪ್ರಶ್ನೆಯೇ ಇಲ್ಲ. ಶುಕ್ರವಾರ ಎಸ್‌ಪಿಗೆ ಸೇರ್ಪಡೆಯಾಗುತ್ತೇನೆ’ ಎಂದಿದ್ದಾರೆ. ಇನ್ನೊಂದೆಡೆ, ಬಿಜೆಪಿ ಶಾಸಕ ಅವತಾರ್ ಇಸಂಗ್ ಭದಾನಾ ಬುಧವಾರ ಜಯಂತ್ ಚೌಧರಿ ನೇತೃತ್ವದ ಆರ್‌ಎಲ್‌ಡಿಗೆ ಸೇರಿದ್ದಾರೆ.
Related Articles
Advertisement
ಉಪಾಧ್ಯಾಯ ವಜಾ: ಉತ್ತರಾಖಂಡದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ರಾಜ್ಯ ಘಟಕದ ಮಾಜಿ ಅಧ್ಯಕ್ಷರಾಗಿದ್ದ ಕಿಶೋರ್ ಉಪಾಧ್ಯಾಯ ಅವರನ್ನು ಕಾಂಗ್ರೆಸ್ ಎಲ್ಲ ಹುದ್ದೆಗಳಿಂದ ವಜಾ ಮಾಡಿದೆ. ಉಪಾಧ್ಯಾಯ ಅವರು ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷರಾಗಿಯೂ, ರಾಜ್ಯ ಕಾಂಗ್ರೆಸ್ ಕೋರ್ ಕಮಿಟಿ ಮತ್ತು ಉತ್ತರಾಖಂಡ ಕಾಂಗ್ರೆಸ್ ಪ್ರದೇಶ ಚುನಾವಣ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಕೇಜ್ರಿವಾಲ್ ಪಂಜಾಬ್ ಮಾದರಿ ಅನಾವರಣಆಮ್ ಆದ್ಮಿ ಪಕ್ಷದ “ಪಂಜಾಬ್ ಮಾದರಿ’ಯನ್ನು ಅನಾವರಣ ಮಾಡಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, “ಯುವಕರಿಗೆ ಉದ್ಯೋಗ, ಭ್ರಷ್ಟಾಚಾರಮುಕ್ತ ಆಡಳಿತ, ಧಾರ್ಮಿಕ ಅಪಚಾರ ಪ್ರಕರಣಗಳಲ್ಲಿ ನ್ಯಾಯ’ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. 300 ಯುನಿಟ್‌ವರೆಗೆ ಉಚಿತ ವಿದ್ಯುತ್, ಡ್ರಗ್ ಹಾವಳಿಗೆ ಬ್ರೇಕ್, 16 ಸಾವಿರ ಮೊಹಲ್ಲಾ ಕ್ಲಿನಿಕ್ ಸ್ಥಾಪನೆ, 18 ವರ್ಷ ದಾಟಿದ ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವುದಾಗಿಯೂ ಘೋಷಿಸಿದ್ದಾರೆ. ಈ ನಡುವೆ, ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಸಮಾಜ್ ಮೋರ್ಚಾ ಬುಧವಾರ 10 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಸಮ್ರಾಲಾ ಕ್ಷೇತ್ರದಿಂದ ರೈತರ ನಾಯಕ ಬಲ್ಬಿàರ್ ಸಿಂಗ್ ರಾಜೇವಾಲ್ ಕಣಕ್ಕಿಳಿಯಲಿದ್ದಾರೆ. 73,000 ಲೀ. ಮದ್ಯ, 1,825 ಕೆಜಿ ಗಾಂಜಾ!
ಉತ್ತರಪ್ರದೇಶದಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ 1.45 ಕೋಟಿ ರೂ. ಮೌಲ್ಯದ 73 ಸಾವಿರ ಲೀಟರ್ ಮದ್ಯ ಹಾಗೂ 2.5 ಕೋಟಿ ರೂ. ಮೌಲ್ಯದ 1,825 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣ ಆಯೋಗ ಮಾಹಿತಿ ನೀಡಿದೆ.