Advertisement

ಏರ್‌ ಸ್ಟ್ರೈಕ್‌ ನಲ್ಲಿ ಉಗ್ರರ ಸಾವಾಗಿಲ್ಲ ಎಂಬುದನ್ನು ಪಾಕ್‌ ಸಾಬೀತುಪಡಿಸಲಿ

12:47 PM Apr 18, 2019 | Hari Prasad |

ನವದೆಹಲಿ: ಪುಲ್ವಾಮ ಆತ್ಮಾಹುತಿ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಗಳು ನಡೆಸಿದ ಬಾಲಾಕೋಟ್‌ ಏರ್‌ ಸ್ಟ್ರೈಕ್‌ ನಲ್ಲಿ ಯಾವುದೇ ಸಾವುನೋವುಗಳಾಗಿಲ್ಲ ಎಂದೇ ಹೇಳಿಕೊಂಡು ಬರುತ್ತಿರುವ ಪಾಕಿಸ್ಥಾನಕ್ಕೆ ಭಾರತದ ರಕ್ಷಣಾ ಸಚಿವೆ ಸವಾಲೆಸೆದಿದ್ದಾರೆ.

Advertisement

ಈ ಏರ್‌ ಸ್ಟ್ರೈಕ್‌ ಸಂದರ್ಭದಲ್ಲಿ ಉಗ್ರ ತರಬೇತು ಶಿಬಿರಗಳು ನಾಶವಾಗಿದೆಯೇ ಇಲ್ಲವೇ ಎಂಬುದನ್ನು ಬಹಿರಂಗಪಡಿಸಬೇಕಾಗಿರುವುದು ಪಾಕಿಸ್ಥಾನದ ಜವಾಬ್ದಾರಿ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಎ.ಎನ್‌.ಐ. ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ನಿರ್ಮಲಾ ಅವರು ಈ ಮಾತುಗಳನ್ನಾಡಿದ್ದಾರೆ. ಆಯ್ದ ಪತ್ರಕರ್ತರನ್ನು ಬಾಲಾಕೋಟ್‌ ನಲ್ಲಿರುವ ಮಸೀದಿಗೆ ಕರೆದೊಯ್ದು ಏರ್‌ ಸ್ಟ್ರೈಕ್‌ ನಿಂದ ಯಾವುದೇ ಹಾನಿಯಾಗಿಲ್ಲ ಎಂದು ಬಿಂಬಿಸುವ ಕೆಲಸವನ್ನು ಪಾಕಿಸ್ಥಾನ ಮಾಡುತ್ತಿದೆ. ಆದರೆ ವಾಯು ದಾಳಿಯ ಸಂದರ್ಭದಲ್ಲಿ ನಮ್ಮ ಪಡೆಗಳು ಯಾವುದೇ ಮದರಸಾ ಮೇಲೆ ದಾಳಿಯನ್ನೇ ಮಾಡಿಲ್ಲ ಬದಲಾಗಿ ಆ ಪ್ರದೇಶದಲ್ಲಿದ್ದ ಉಗ್ರ ತರಬೇತಿ ಶಿಬಿರಗಳ ಮೇಲೆ ದಾಳಿ ಮಾಡಿದ್ದವು ಎಂಬುದನ್ನು ರಕ್ಷಣಾ ಸಚಿವೆ ಸ್ಪಷ್ಟಪಡಿಸಿದ್ದಾರೆ.

ವಾಯು ದಾಳಿಯಲ್ಲಿ ಅಷ್ಟುಪ್ರಮಾಣದ ಉಗ್ರರು ಸಾವೀಗೀಡಾಗಿಲ್ಲ ಎಂದು ತೋರಿಸುವ ಅಗತ್ಯ ಪಾಕಿಸ್ಥಾನಕ್ಕಿತ್ತು. ಆದರೆ ಇದಕ್ಕಾಗಿ ಅವರು 40 ದಿನಗಳ ಬಳಿಕ ಪತ್ರಕರ್ತರ ಸಣ್ಣ ಗುಂಪೊಂದನ್ನು ಹಾಗೂ ಭದ್ರತಾ ಅಧಿಕಾರಿಗಳ ನಿಯೋಗವನ್ನು ಮದರಸಾಕ್ಕೆ ಕರೆದೊಯ್ದಿತ್ತು. ಆದರೆ ಈ ಮದರಸ ಬೆಟ್ಟದ ಇಳಿಜಾರು ಭಾಗದಲ್ಲಿದೆ ಮತ್ತು ಈ ಮದರಸಾದ ಹಿಂದೆ ದಟ್ಟವಾದ ಅರಣ್ಯಪ್ರದೆಶದಲ್ಲಿ ಉಗ್ರ ತರಬೇತು ಶಿಬಿರ ಇತ್ತು ಅದನ್ನು ಗುರಿಯಾಗಿಸಿ ನಮ್ಮ ವಾಯು ಪಡೆಗಳು ದಾಳಿ ನಡೆಸಿದ್ದವು ಎಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದರು.

ಬಾಲಾಕೋಟ್‌ ವಾಯುದಾಳಿಯ ಫ‌ಲಿತಾಂಶದ ಕುರಿತು ಭಾರತ ಸರಕಾರ ಯಕೆ ಮೌನವಹಿಸುತ್ತಿದೆ ಎಂಬ ಪ್ರಶ್ನೆಗೆ ಸಚಿವೆ ಉತ್ತರಿಸಿದ್ದು ಹೀಗೆ, ‘ಬಾಲಾಕೋಟ್‌ ವಾಯುದಾಳಿ ನಡೆಯುವುದಕ್ಕೂ ಮುಂಚೆ ಹಲವಾರು ಪಾಕಿಸ್ಥಾನಿ ವೆಬ್‌ ಸೈಟ್‌ ಗಳು ಈ ಉಗ್ರಶಿಬಿರಗಳಲ್ಲಿ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ವರದಿ ಮಾಡಿದ್ದವು. ಮಾತ್ರವಲ್ಲದೇ 2008ರ ಮುಂಬಯಿ ದಾಳಿ ರೂವಾರಿ ಜಾಗತಿಕ ಉಗ್ರ ಸಹ ಯುವಕರಿಗೆ ತನ್ನ ಸಂಘಟನೆ ಸೇರುವಂತೆ ಬಹಿರಂಗ ಕರೆ ನೀಡುತ್ತಿದ್ದ. ಇಷ್ಟು ಮಾತ್ರವಲ್ಲದೇ ಈ ಉಗ್ರಗಾಮಿ ತರಬೇತಿ ಕೇಂದ್ರಗಳು ಯುವಕರನ್ನು ತರಬೇತುಗೊಳಿಸಲು ನಿವೃತ್ತ ತರಬೇತುದಾರರನ್ನೂ ಸಹ ನೇಮಿಸಿಕೊಳ್ಳಲಾಗುತ್ತಿತ್ತು. ನೀವು ಆ ವೆಬ್‌ ಸೈಟ್‌ ಗಳನ್ನೊಮ್ಮೆ ನೋಡಿದರೆ ಆ ಉಗ್ರ ಶಿಬಿರಗಳಲ್ಲಿ ಎಷ್ಟು ಜನರಿಗೆ ಉಗ್ರ ತರಬೇತು ನೀಡಲಾಗುತ್ತಿತ್ತು ಎಂಬುದು ನಿಮಗೇ ತಿಳಿಯುತ್ತದೆ ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next