Advertisement

ಪೊಲೀಸ್ ಲೋಗೋ ಹಾಕಿದ ಕಾರಿನೊಳಗೆ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್,ಯೋಧ ಸೇರಿ ನಾಲ್ವರ ಸೆರೆ

09:43 AM Dec 05, 2019 | Nagendra Trasi |

ಉತ್ತರಪ್ರದೇಶ: ಸಿಆರ್ ಪಿಎಫ್ ಯೋಧ ಹಾಗೂ ನಿವೃತ್ತ ಜೈಲರ್ ಮಗ ಸೇರಿದಂತೆ ನಾಲ್ವರು ಹತ್ತನೆ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Advertisement

ಕಾರಿಗೆ ಪೊಲೀಸ್ ಲಾಂಛನ ಹಾಕಿ ಅದರಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ವರದಿ ತಿಳಿಸಿದೆ. ಹಾಲಿಯಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ದೇವಿವೆರ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಕಿಡ್ನಾಪ್ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next