ಉತ್ತರ ಪ್ರದೇಶ : ಕಬ್ಬಡಿ ಕ್ರೀಡಾಪಟುಗಳಿಗೆ ಇಲ್ಲಿನ ಶೌಚಾಲಯದಲ್ಲಿ ಊಟದ ವ್ಯವಸ್ಥೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಹಾರನ್ ಪುರದಲ್ಲಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಸೆಪ್ಟೆಂಬರ್ 16 ರಂದು ಸಹರಾನ್ ಪುರದಲ್ಲಿ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬ್ಬಡಿ ಟೂರ್ನಿ ನಡೆದಿದ್ದು, ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಆಹಾರ ತಯಾರಿಸಿ ಟಾಯ್ಲೆಟ್ ನಲ್ಲಿ ಇಡಲಾಗಿದೆ ಅದನ್ನೇ ಕ್ರೀಡಾಪಟುಗಳು ಬಡಿಸಿಕೊಂಡು ಊಟಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ವಿಡಿಯೋ ಕೂಡಾ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರಿ ಆಕ್ರೋಶಕ್ಕೆ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಕ್ರೀಡಾ ಅಧಿಕಾರಿಗಳು ಕ್ರೀಡಾಪಟುಗಳಿಗೆ ಉತ್ತಮವಾದ ಆಹಾರವನ್ನೇ ನೀಡಲಾಗಿದೆ ”ಮಳೆಯಾಗುತ್ತಿದ್ದರಿಂದ ಸ್ವಿಮ್ಮಿಂಗ್ ಪೂಲ್ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಿದ್ದೆವು, ಈಜುಕೊಳದ ಪಕ್ಕದಲ್ಲಿರುವ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಆಹಾರ ಇಡಲಾಗಿತ್ತು, ಕ್ರೀಡಾಂಗಣದಲ್ಲಿ ಕೆಲ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಾರಣ ಆಹಾರ ಇಡಲು ಬೇರೆ ಸ್ಥಳ ಇರಲಿಲ್ಲ ಎಂದು ಅನಿಮೇಶ್ ಸಕ್ಸೇನಾ ಸಮಜಾಯಿಷಿ ನೀಡಿದ್ದಾರೆ. ಆದರೆ ವಿಡಿಯೋ ದಲ್ಲಿ ಕಾಣುವಂತೆ ಅಲ್ಲಿನ ಕ್ರೀಡಾಪಟುಗಳು ಹೇಳಿಕೆ ನೀಡಿದ್ದು ಊಟಕ್ಕೆ ಸರಿಯಾದ ಜಾಗದ ವ್ಯವಸ್ಥೆಯೂ ಇರಲಿಲ್ಲ, ಆಹಾರಗಳನ್ನು ಶೌಚಾಲಯಲ್ಲೇ ಇಟ್ಟಿದ್ದರು ನಾವು ಅಲ್ಲೇ ಊಟ ಮಾಡಬೇಕಿತ್ತು, ಅಲ್ಲದೆ ಊಟದ ಗುಣಮಟ್ಟವು ಕೆಟ್ಟದಾಗಿತ್ತು ಎಂದು ದೂರಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ಅವಧಿಯಲ್ಲಿ ಹಗರಣ ನಡೆದಿದ್ದರೆ ಸಿಬಿಐ ಮೂಲಕ ತನಿಖೆ ನಡೆಸಲಿ: ಕಿಮ್ಮನೆ